ಉಗ್ರರ ಒಳನುಸುಳುವಿಕೆ ತಡೆದು, 5 ಉಗ್ರರನ್ನು ಕೊಂದ ಸೇನೆ – News Mirchi

ಉಗ್ರರ ಒಳನುಸುಳುವಿಕೆ ತಡೆದು, 5 ಉಗ್ರರನ್ನು ಕೊಂದ ಸೇನೆ

ನಿಯಂತ್ರಣ ರೇಖೆಯ ಸಮೀಪ ಮತ್ತೊಂದು ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಭಾರತೀಯ ಸೇನೆ ಶುಕ್ರವಾರ ವಿಫಲಗೊಳಿಸಿದೆ. ಜಮ್ಮೂ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟಾರ್ ನಲ್ಲಿ ಪಾಕಿಸ್ತಾನದಿಂದ ಉಳನುಸುಳುತ್ತಿದ್ದ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಿದ ಸೇನೆ, ಕನಿಷ್ಠ 5 ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಭಯೋತ್ಪಾದಕರನ್ನು ಕೊಂದಿದೆ. ಇದರ ಬೆನ್ನಲ್ಲೇ ನಿಯಂತ್ರಣ ರೇಖೆಯುದ್ದಕ್ಕೂ ಹೈ ಅಲರ್ಟ್ ಘೋಷಿಸಲಾಗಿದೆ.

ಉರಿ ಸೆಕ್ಟಾರ್ ನಲ್ಲಿ ಉಗ್ರರ ಒಳನುಸುಳುವಿಕೆಯನ್ನು ತಡೆಯಲು ಗಡಿಯುದ್ದಕ್ಕೂ ಯೋಧರನ್ನು ನಿಯೋಜಿಸಲಾಗಿತ್ತು. ಇಂದು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಒಳನುಸುಳಲು ಪ್ರಯತ್ನಿಸಿದ ಉಗ್ರರ ಮೇಲೆ ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಉಗ್ರರೂ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ ಇದು ಮೂರನೇ ಬಾರಿ ಉಗ್ರರು ಒಳನುಸುಳುವ ಪ್ರಯತ್ನ ನಡೆಸಿ ವಿಫಲವಾಗಿರುವುದು.

Loading...