ಜಿಡ್ಡು ಚರ್ಮಕ್ಕೆ 5 ಸಿಂಪಲ್ ಮನೆ ಮದ್ದು, ಪ್ರಯತ್ನಿಸಿ ನೋಡಿ – News Mirchi

ಜಿಡ್ಡು ಚರ್ಮಕ್ಕೆ 5 ಸಿಂಪಲ್ ಮನೆ ಮದ್ದು, ಪ್ರಯತ್ನಿಸಿ ನೋಡಿ

ಜಿಡ್ಡು ಚರ್ಮವನ್ನು ನಿಭಾಯಿಸುವುದು ಕಷ್ಟ. ಹೊರ ಚರ್ಮದ ಮೇಲೆ ಸಂಗ್ರಹವಾಗುವ ಹೆಚ್ಚಿನ ಎಣ್ಣೆ ಜಿಡ್ಡು ಅಂಶವು ಬಿಳಿ ಮತ್ತು ಕಪ್ಪು ಮೊಡವೆಗಳು, ಕೆಂಪಗಿನ ದೊಡ್ಡ ಮೊಡವೆಗಳು ಮತ್ತು ಚರ್ಮದ ಕಿರಿಕಿರಿಗೆ ಕಾರಣವಾಗುತ್ತದೆ.

ಆದರೆ ಜಿಡ್ಡು ಚರ್ಮದಿಂದ ಕೆಲವು ಪ್ರಯೋಜನಗಳೂ ಇವೆ. ಜಿಡ್ಡು ಚರ್ಮ ಹೊಂದಿದವರಲ್ಲಿ ಚರ್ಮದ ಮೇಲಿನ ಸುಕ್ಕುಗಳು ಕಡಿಮೆ ಇರುತ್ತವೆ. ಒಣ ಚರ್ಮ ಹೊಂದಿದವರಿಗೆ ಹೋಲಿಸಿದರೆ ಹೆಚ್ಚು ವಯಸ್ಸಾದಂತೆ ಕಾಣುವುದಿಲ್ಲ.

ಚರ್ಮದಲ್ಲಿನ ಅತಿಯಾದ ಜಿಡ್ಡಿನ ಅಂಶದಿಂದ ಅತಿಯಾದ ಮೇದೋಜೀರಕ ಗ್ರಂಥಿಗಳ ಸ್ರಾವವುಂಟಾಗುತ್ತದೆ. ಇಂತಹವರು ಸಾಮಾನ್ಯವಾಗಿ ಹೊಳೆಯುವ ಚರ್ಮವನ್ನು ಹೊಂದಿದ್ದು, ಅವರ ಚರ್ಮವು ದೊಡ್ಡ ರಂದ್ರಗಳನ್ನು ಹೊಂದಿರುತ್ತದೆ.

ತಿನ್ನುವ ಆಹಾರಗಳು, ಜೆನೆಟಿಕ್ಸ್, ಹೆಚ್ಚು ಒತ್ತಡ ಮತ್ತು ಪ್ರಾಯದ ಕಾರಣದಿಂದಾಗುವ ಹಾರ್ಮೋನುಗಳ ಬದಲಾವಣೆ ಆಯಿಲೀ ಸ್ಕಿನ್ ಗೆ ಕಾರಣವಾಗುತ್ತದೆ. ಮುಟ್ಟಿನ ಸಮಯದಲ್ಲಿ, ಗರ್ಭಾವಸ್ಥೆಯಲ್ಲಿ, ಮುಟ್ಟು ನಿಲ್ಲುವ ಸಂದರ್ಭದಲ್ಲಿ ಅಥವಾ ಗರ್ಭನಿರೋಧಕ ಮಾತ್ರೆಗಳನನ್ನು ತೆಗೆದುಕೊಳ್ಳುತ್ತಿದ್ದಾಗ ಮಹಿಳೆಯರು ಹೆಚ್ಚಾಗಿ ಆಯ್ಲಿ ಸ್ಕಿನ್ ಗೆ ತುತ್ತಾಗುತ್ತಾರೆ.

ಜಿಡ್ಡು ಚರ್ಮವನ್ನು ನಿಭಾಯಿಸುವುದು ಕಷ್ಟವಾದರೂ, ಇದರಿಂದ ವಿಮುಕ್ತಿ ಹೊಂದಲು ಕೆಲವು ದಾರಿಗಳಿವೆ. ಇದಕ್ಕಾಗಿ ಕೆಮಿಕಲ್ ಹೊಂದಿರುವ ಸ್ಕಿನ್ ಕೇರ್ ಉತ್ಪನ್ನಗಳಿಗಾಗಿ ಹೆಚ್ಚು ವೆಚ್ಚ ಮಾಡುವ ಅವಶ್ಯಕತೆಯಿಲ್ಲ. ಮನೆ ಮದ್ದಿನಿಂದಲೇ ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಸಿಗುತ್ತದೆ.

1. ಮೊಟ್ಟೆಯ ಬಿಳಿಭಾಗ

ಮೊಟ್ಟೆಯ ಬಿಳಿಭಾಗವು ಹೆಚ್ಚು ವಿಟಮಿನ್ ‘ಎ’ ಹೊಂದಿರುತ್ತದೆ. ಹೀಗಾಗಿ ಇದು ಚರ್ಮದ ಕಲೆಗಳನ್ನು ಒಣಗಿಸುವುದಲ್ಲದೆ, ಜಿಡ್ಡು ಚರ್ಮವನ್ನು ಬಿಗಿಗೊಳಿಸುತ್ತದೆ.

ಒಂದು ಮೊಟ್ಟೆಯ ಬಿಳಿಭಾಗವನ್ನು ಮುಖದ ಚರ್ಮದ ಮೇಲೆ ಹಚ್ಚಿ, ಅದನ್ನು ಒಣಗಲು ಬಿಡಿ. ಒಣಗಿದ ನಂತರ ಮುಖವನ್ನು ಬಿಸಿ ನೀರಿನಿಂದ ತೊಳೆಯಿರಿ. ವಾರಕ್ಕೆರಡು ಬಾರಿ ಈ ರೀತಿ ಮಾಡಿ.

ಮತ್ತೊಂದು ವಿಧಾನ: ಒಂದು ಮೊಟ್ಟೆಯ ಬಿಳಿ ಭಾಗವನ್ನು ಅರ್ಧ ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ. 15 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ಬಿಸಿ ನೀರಿನಿಂದ ತೊಳೆಯಿರಿ. ಇದನ್ನು ಚರ್ಮವನ್ನು ಬಿಗಿಗೊಳಿಸುವದಲ್ಲದೆ, ಅತಿಯಾದ ಜಿಡ್ಡಿನ ಅಂಶವನ್ನು ಹೀರಿಕೊಳ್ಳುತ್ತದೆ.

2. ನಿಂಬೆ ರಸ

ನಿಂಬೆ ರಸವು ಸಿಟ್ರಿಕ್ ಆಮ್ಲವನ್ನು ಹೊಂದಿದ್ದು ಜಿಡ್ಡು ಚರ್ಮವನ್ನು ಸುಲಭವಾಗಿ ಹೋಗಲಾಡಿಸುತ್ತದೆ. ಇದು ನಂಜು ನಿರೋಧಕ ಗುಣಗಳನ್ನು ಹೊಂದಿದೆ.

ಒಂದು ಟೀ ಸ್ಪೂನ್ ತಾಜಾ ನಿಂಬೆ ರಸವನ್ನು ಅರ್ಧ ಟೀ ಸ್ಪೂನ್ ಶುದ್ಧ ನೀರಿನೊಂದಿಗೆ(ಡಿಸ್ಟಿಲ್ಡ್ ವಾಟರ್) ಹತ್ತಿಯನ್ನು ಬಳಸಿ ಮುಖಕ್ಕೆ ಹಚ್ಚಿ. 10 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಬಿಸಿ ನೀರಿನಿಂದ ತೊಳೆಯಿರಿ. ನಿಂಬೆ ರಸವು ಚರ್ಮವನ್ನು ಒಣಗುವಂತೆ ಮಾಡುತ್ತದೆ. ಆದ್ದರಿಂದ ಜಿಡ್ಡುರಹಿತ ಲೋಷನ್ ಆಥವಾ ಕ್ರೀಮ್ ಹಚ್ಚಿ. ಪ್ರತಿ ದಿನ ಒಮ್ಮೆ ಹೀಗೆ ಮಾಡಿ.

ಕಿಡ್ನಿ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ, ಇಲ್ಲಿದೆ ಕೆಲವು ಸಲಹೆ

ಮತ್ತೊಂದು ವಿಧಾನ: ಒಂದು ಟೇಬಲ್ ಸ್ಪೂನ್ ನಿಂಬೆ ರಸ, ಅರ್ಧ ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು ಒಂದು ಟೇಬಲ್ ಸ್ಪೂನ್ ಹಾಲು ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತ ತಣ್ಣೀರಿನಿಂದ ತೊಳೆಯಿರಿ. ಪ್ರತಿ ದಿನ ಒಮ್ಮೆ ಹೀಗೆ ಮಾಡುವುದರಿಂದ ಒಂದು ವಾರದಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ.

3: ಮೊಸರು

ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ನಿಧಾನವಾಗಿ ಚರ್ಮದಲ್ಲಿನ ಜಿಡ್ಡನ್ನು ಹೀರಿಕೊಳ್ಳುತ್ತದೆ. ಒಂದು ಟೇಬ್ಲ ಸ್ಪೂನ್ ಮೊಸರನ್ನು ಮುಖದ ಮೇಲೆ ಹಚ್ಚಿ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ದಿನಕ್ಕೊಮ್ಮೆ ಹೀಗೆ ಮಾಡಿ.

4. ಟೊಮ್ಯಾಟೋ

ಟೊಮ್ಯಾಟೋಗಳಲ್ಲಿನ ತಂಪು ಮಾಡುವ ಗುಣವು ಜಿಡ್ಡಿನ ಚರ್ಮಕ್ಕೆ ಉತ್ತಮ ಫಲಿತಾಂಶ ನೀಡುತ್ತದೆ. ಟೊಮ್ಯಾಟೋದಲ್ಲಿ ವಿಟಮಿನ್ ‘ಸಿ’ ಹೆಚ್ಚಾಗಿದ್ದು, ಎಣ್ಣೆಯನ್ನು ಹೀರಿಕೊಳ್ಳುವ ಆಮ್ಲಗಳು ಚರ್ಮದಲ್ಲಿನ ಅತಿಯಾದ ಎಣ್ಣೆ ಅಂಶವನ್ನು ತೊಲಗಿಸುತ್ತವೆ.

1. ಒಂದು ಟೊಮ್ಯಾಟೋ ಹಣ್ಣನ್ನು ಎರಡು ಭಾಗ ಮಾಡಿ ಮುಖದ ಮೇಲೆ ಉಜ್ಜಿ.
2. ಟೊಮ್ಯಾಟೋ ರಸವು ಚರ್ಮವನ್ನು ನೆನೆಸುವವರೆಗೂ ಅಂದರೆ ಕನಿಷ್ಟ 15 ನಿಮಿಷಗಳ ಕಾಲ ಬಿಡಿ
3.ನಂತ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಒಣಗುವವರೆಗೂ ಬಿಟ್ಟು ಜಿಡ್ಡು ರಹಿತ ಲೋಷನ್ ಅಥವಾ ಕ್ರೀಮ್ ಹಚ್ಚಿ.

5. ಸೌತೆಕಾಯಿ

ಸೌತೆಕಾಯಿಯಲ್ಲಿನ ತಂಪು ಮಾಡುವ ಗುಣವೂ ಜಿಡ್ಡು ಚರ್ಮಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಇದರಲ್ಲಿನ ವಿಟಮಿನ್ ‘ಎ’ ಮತ್ತು ‘ಇ’, ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ಜಿಡ್ಡು ಚರ್ಮಕ್ಕೆ ಒಳ್ಳೆಯದು.

ಒಂದು ತಾಜಾ ಸೌತೆಕಾಯಿಯನ್ನು ದುಂಡಗೆ ಸಣ್ಣ ಪೀಸುಗಳಾಗಿ ಕತ್ತರಿಸಿ. ಮುಖದ ಮೇಲೆ ಅವುಗಳಿಂದ ನಿಧಾನಕ್ಕೆ ತಿಕ್ಕಿ. ಇಡೀ ರಾತ್ರಿಯೆಲ್ಲಾ ಹಾಗೆಯೇ ಬಿಡಿ. ಬೆಳಗ್ಗೆ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಪ್ರತಿದಿನ ಮಲಗುವ ಮುನ್ನ ಹೀಗೆ ಮಾಡಿ.

ಬಡತನದ ಕಾರಣಕ್ಕೆ ಅತ್ಯಾಚಾರ ನಡೆಸಿದವನನ್ನೇ ಮದುವೆಯಾದ ಅಪ್ರಾಪ್ತ ಬಾಲಕಿ

ಮತ್ತೊಂದು ವಿಧಾನ: ಒಂದು ಟೀ ಸ್ಪೂನ್ ಸೌತೆಕಾಯಿ ರಸ ಮತ್ತು ಒಂದು ಟೀ ಸ್ಪೂನ್ ನಿಂಬೆ ರಸದ ಮಿಶ್ರಣವನ್ನು ಮುಖಕ್ಕೆ ಹಚ್ಚಿ. ಒಣಗಲು ಬಿಡಿ. ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ಪ್ರತಿನಿತ್ಯ ಮಾಡಿದರೆ ಉತ್ತಮ ಫಲಿತಾಂಶ ಲಭಿಸುತ್ತದೆ.

Loading...