ಪ್ರತಿ ವರ್ಷ 5 ಸಾವಿರ ಹೆಚ್ಚುವರಿ ಪಿಜಿ ವೈದ್ಯಕೀಯ ಸೀಟು |News Mirchi

ಪ್ರತಿ ವರ್ಷ 5 ಸಾವಿರ ಹೆಚ್ಚುವರಿ ಪಿಜಿ ವೈದ್ಯಕೀಯ ಸೀಟು

ಮಾಧ್ಯಮಿಕ ಮತ್ತು ತೃತೀಯ ಹಂತಗಳಲ್ಲಿ ತಜ್ಞ ವೈದ್ಯರ ಲಭ್ಯತೆ ಹೆಚ್ಚಿಸುವಂತೆ ಮಾಡಲು ಪ್ರತಿ ವರ್ಷ 5,000 ಹೆಚ್ಚುವರಿ ಪಿಜಿ ವೈದ್ಯಕೀಯ ಸೀಟುಗಳನ್ನು ಸೃಷ್ಟಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಇಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ ಕೇಂದ್ರ ಬಜೆಟ್ ಪ್ರಕಾರ, 2017-18 ರ ಬಜೆಟ್ ನಲ್ಲಿ ‌ಆರೋಗ್ಯ ಸಚಿವಾಲಯಕ್ಕೆ ರೂ.47,352.51 ಹಣ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ (ರೂ.37,061.55) ಹೋಲಿಸಿದರೆ ಈ ಬಾರಿ ಶೇ.27.76 ರಷ್ಟು ಹೆಚ್ಚಳ ಮಾಡಲಾಗಿದೆ.

ಮಾಧ್ಯಮಿಕ ಮತ್ತು ತೃತೀಯ ಹಂತದ ಚಿಕಿತ್ಸಾ ಕೇಂದ್ರಗಳನ್ನು ಬಲಪಡಿಸಲು, ಸಾಕಷ್ಟು ತಜ್ಞ ವೈದ್ಯರ ಅಗತ್ಯವಿದೆ. ಹೀಗಾಗಿ ಹೆಚ್ಚುವರಿಯಾಗಿ ಪ್ರತಿವರ್ಷ 5 ಸಾವಿರ ಸ್ನಾತಕೋತ್ತರ ವೈದ್ಯಕೀಯ ಸೀಟುಗಳನ್ನು ನೀಡಲಾಗುವುದು ಎಂದು ಹೇಳಿದೆ

ಭಾರತದಲ್ಲಿ 472 ವೈದ್ಯಕೀಯ ಕಾಲೇಜುಗಳಿದ್ದು, ಸುಮಾರು ಹತ್ತು ಲಕ್ಷ ವೈದ್ಯರು ನೋಂದಾಯಿತರಾಗಿದ್ದಾರೆ. ಆದರೂ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿ 1000 ಜನರಿಗೆ ಒಬ್ಬರು ವೈದ್ಯರಿರಬೇಕು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

Loading...
loading...
error: Content is protected !!