ವಿಚ್ಛೇದನಕ್ಕೆ 6 ತಿಂಗಳು ಕಾಲಾವಕಾಶ ನೀಡುವುದು ಕಡ್ಡಾಯವಲ್ಲ |News Mirchi

ವಿಚ್ಛೇದನಕ್ಕೆ 6 ತಿಂಗಳು ಕಾಲಾವಕಾಶ ನೀಡುವುದು ಕಡ್ಡಾಯವಲ್ಲ

ದಂಪತಿಗಳಿಗೆ ವಿಚ್ಛೇದನ ಮಂಜೂರು ಮಾಡುವ ಮೊದಲು ದಂಪತಿಗಳು ವಿಚ್ಛೇದನ ತೆಗೆದುಕೊಳ್ಳುವ ಕುರಿತು ಮರುಚಿಂತನೆ ನಡೆಸಲು ಅನುಕೂಲವಾಗುವಂತೆ ಕನಿಷ್ಟ 6 ತಿಂಗಳ ಸಮಯಾವಕಾಶ ನೀಡುತ್ತಿದ್ದ ನಿಯಮಗಳನ್ನು ಇನ್ನು ಮುಂದೆ ಟ್ರಯಲ್ ಕೋರ್ಟ್ ಗಳು ಕಡ್ಡಾಯವಾಗಿ ಪಾಲಿಸಬೇಕಾದ ಅಗತ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಬೇಕೆಂದು ಬಂದ ದಂಪತಿಗಳಿಗೆ ಅವರ ನಡುವೆ ರಾಜಿಗೆ ಅವಕಾಶವಿಲ್ಲವೆಂದು ಕೋರ್ಟ್ ಭಾವಿಸಿದರೆ, ಆ ಮರುಚಿಂತನೆಗೆ ದಂಪತಿಗಳಿಗೆ ಕಾಲಾವಕಾಶ ನೀಡುವ ನಿಯಮವನ್ನು ಪಾಲಿಸದೆಯೇ ವಿಚ್ಚೇದನ ಮಂಜೂರು ಮಾಡಬಹುದು ಎಂದು ಮಂಗಳವಾರ ತೀರ್ಪಿತ್ತಿದೆ.

ಹಿಂದೂ ವಿವಾಹ ಕಾಯ್ದೆ 1955 ಪ್ರಕಾರ, ವಿಚ್ಛೇದನ ಕೋರಿ ಅರ್ಜಿ ದಾಖಲಾದ ನಂತರ ಮುಂದಿನ ವಿಚಾರಣೆಗೆ ಕನಿಷ್ಟ 6 ತಿಂಗಳ ವಿರಾಮವಿರಬೇಕು. ಈ ವಿರಾಮದಲ್ಲಿ ಅವರ ನಡುವೆ ರಾಜಿಗೆ ಅವಕಾಶ ಸಿಗುತ್ತದೆ ಎಂಬ ಉದ್ದೇಶದಿಂದ ಈ ನಿಯಮವನ್ನು ಸೇರ್ಪಡೆ ಮಾಡಲಾಗಿತ್ತು. ಆದರೆ, ಈ ಕಾಯ್ದೆಯಲ್ಲಿ ಈ ನಿಯಮವಿರುವ ಸೆಕ್ಷನ್ 13ಬಿ(2) ಅನ್ನು ಕಡ್ಡಾಯವಾಗಿ ಪಾಲಿಸಬೇಕಾದ ಅಗತ್ಯವಿಲ್ಲ, ಅದು ಕೇವಲ ಸಲಹೆಯಷ್ಟೇ. ದಂಪತಿಗಳಿಬ್ಬರೂ ಪುನಃ ಒಂದಾಗುವ ಸಾಧ್ಯತೆಯೇ ಇಲ್ಲವೆಂದು ಟ್ರಯಲ್ ಕೋರ್ಟ್ ಭಾವಿಸಿದರೆ ಅದಕ್ಕನುಗುಣವಾಗಿ ತೀರ್ಮಾನ ಕೈಗೊಳ್ಳಬಹುದು ಎಂದು ಜಸ್ಟೀಸ್ ಎ.ಕೆ.ಗೋಯೆಲ್, ಜಸ್ಟೀಸ್ ಯು.ಯು.ಲಲಿತ್ ಅವರ ನ್ಯಾಯಪೀಠ ಹೇಳಿದೆ.

ಅರ್ಜಿದಾರರಾದ ದಂಪತಿಗಳು ಸೂಕ್ತ ಕಾರಣದಿಂದ ವೈಯುಕ್ತಿಕ ವಿಚಾರಣೆಗೆ ಹಾಜರಾಗದಂತಹ ಪರಿಸ್ಥಿತಿಗಳಲ್ಲಿ ಪೋಷಕರು ವೀಡಿಯೋ ಕಾನ್ಫರೆನ್ಸ್ ಸೌಲಭ್ಯವನ್ನು ಬಳಸಿಕೊಳ್ಳಬಹುದು, ಅವರ ಪರ ತಂದೆ ತಾಯಿಗಳು ಅಥವಾ ಸಹೋದರರಾಗಲಿ ಹಾಜರಾಗಬಹುದು ಎಂದು ನ್ಯಾಯಪೀಠ ಹೇಳಿದೆ. 8 ವರ್ಷಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದೇವೆ, ಆರು ತಿಂಗಳ ಕಾಲಾವಕಾಶ ನಿಯಮವನ್ನು ಸಡಿಸಿಲಿ ತಮಗೆ ವಿಚ್ಛೇದನ ಮಂಜೂರು ಮಾಡುವಂತೆ ದಾಖಲಾಗಿದ್ದ ಪಿಟೀಷನ್ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.


Get Latest updates on WhatsApp. Send ‘Add Me’ to 8550851559

Loading...
loading...
error: Content is protected !!