ಪ್ರತಿ 10 ರಲ್ಲಿ 6 ಡ್ರೈವಿಂಗ್ ಲೈಸೆನ್ಸ್ ಗಳಿಗೆ ಪರೀಕ್ಷೆಯೇ ಇಲ್ಲ!

ಭಾರತದಲ್ಲಿ ಪ್ರತಿ 10 ರಲ್ಲಿ 6 ಚಾಲನಾ ಪರವಾನಗಿಗಳು ಯಾವುದೇ ಪರೀಕ್ಷೆಯಿಲ್ಲದೆಯೇ ನೀಡಿದ್ದಾಗಿವೆ ಎಂದು ಸಮೀಕ್ಷೆಯೊಂದು ಹೇಳಿದೆ. 5 ಮೆಟ್ರೋ ನಗರಗಳು ಸೇರಿದಂತೆ ಒಟ್ಟು 10 ನಗರಗಳಲ್ಲಿ ಈ ಕುರಿತು ಸಮೀಕ್ಷೆ ನಡೆಸಲಾಗಿದೆ. ಸೇವ್ ಲೈಫ್ ಫೌಂಡೇಷನ್ ಸಂಸ್ಥೆಯು ಈ ಸಮೀಕ್ಷೆ ನಡೆಸಿದ್ದು, ರಾಜ್ಯ ಸಭೆಯಲ್ಲಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಕುರಿತು ಚರ್ಚೆಗೆ ಸಿದ್ಧವಾಗಿರುವ ಸಂದರ್ಭದಲ್ಲಿಯೇ ಈ ಸಮೀಕ್ಷೆ ಹೊರಬಿದ್ದಿದೆ.

ಆಗ್ರಾದಲ್ಲಿ ಶೇ.12 ರಷ್ಟು ಚಾಲಕರು ಪ್ರಾಮಾಣಿಕವಾಗಿ ಪರವಾನಗಿ ಪಡೆದಿದ್ದರೆ, 88 ರಷ್ಟು ಜನ ಡ್ರೈವಿಂಗ್ ಟೆಸ್ಟ್ ಇಲ್ಲದೆಯೇ ಲೈಸೆನ್ಸ್ ಪಡೆದಿರುವುದನ್ನು ಅಂಗೀಕರಿಸಿದ್ದಾರಂತೆ. ಜೈಪುರದಲ್ಲಿ ಶೇ.72, ಗುವಾಹತಿಯಲ್ಲಿ ಶೇ.64, ದೆಹಲಿಯಲ್ಲಿ ಶೇ.54 ಮತ್ತು ಮುಂಬಯಿಯಲ್ಲಿ ಅರ್ಧದಷ್ಟು ಜನ ಕಡ್ಡಾಯ ಚಾಲನಾ ಪರೀಕ್ಷೆಯೇ ತೆಗೆದುಕೊಂಡಿಲ್ಲವೆಂದು ತಿಳಿದು ಬಂದಿದೆ.

ಜಿಯೋ ಫೈಬರ್ ಬ್ರಾಡ್ ಬ್ಯಾಂಡ್, ತಿಂಗಳಿಗೆ 100 ಜಿಬಿ, 3 ತಿಂಗಳು ಉಚಿತ?

ಶೇ.59 ರಷ್ಟು ಜನ ಡ್ರೈವಿಂಗ್ ಟೆಸ್ಟ್ ಇಲ್ಲದೆ ಲೈಸೆನ್ಸ್ ಪಡೆದಿರುವುದಾಗಿ ಅಂಗೀಕರಿಸಿರುವುದು ಆತಂಕಕಾರಿ ವಿಷಯವಾಗಿದ್ದು, ಭಾರತದಲ್ಲಿ ಲೈಸೆನ್ಸ್ ನೀಡುವ ಪ್ರಕ್ರಿಯೆಯಲ್ಲಿ ನಡೆಯುವ ಭ್ರಷ್ಟಾಚಾರ, ಅಕ್ರಮಗಳಿಗೆ ಸಾಕ್ಷಿಯಾಗಿದೆ.

ಭಾರತದಲ್ಲಿ 997 ಪ್ರಾದೇಶಿಕ ಸಾರಿಗೆ ಕಛೇರಿಗಳಿದ್ದು(ಆರ್.ಟಿ.ಒ), ಪ್ರತಿವರ್ಷ ದೇಶಾದ್ಯಂತ 1.15 ಕೋಟಿಯಷ್ಟು ಹೊಸ ಮತ್ತು ನವೀಕರಣಗೊಂಡ ಲೈಸೆನ್ಸ್ ಗಳನ್ನು ನೀಡಲಾಗುತ್ತಿದೆ. ಅಂದಾಜಿನ ಪ್ರಕಾರ ಪ್ರತಿ ಆರ್.ಟಿ.ಒ ಮೂಲಕ ಪ್ರತಿದಿನ ಸುಮಾರು 40 ಲೈಸೆನ್ಸ್ ಗಳನ್ನು ನೀಡಲಾಗುತ್ತಿದೆಯಂತೆ. ದೆಹಲಿಯಂತಹ ನಗರಗಳಲ್ಲಿ ಅದು 130ಕ್ಕೆ ತಲುಪುತ್ತದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಲೆಕ್ಷನ್ ಗೆ ನಿಂತಿರುವುದು ಪ್ರತಿಭಾ ಹಂತಕ!

ದಿನವೊಂದರಲ್ಲಿ 130-150 ಚಾಲನಾ ಪರೀಕ್ಷೆ ನಡೆಸುವುದು ಒಬ್ಬ ಅಧಿಕಾರಿಗೆ ಅಸಾಧ್ಯ, ಹಾಗಾಗಿ 15-20 ಲೈಸೆನ್ಸ್ ಗಳನ್ನು ಮಾತ್ರ ನೀಡಲು ಸೂಚಿಸುವಂತೆ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯ 2014 ರಲ್ಲಿ ಕೋರ್ಟ್ ಅನ್ನು ಒತ್ತಾಯಿಸಿತ್ತು.