636156379401532037

ಕಾಳ ಧನಿಕರಿಗೆ ಮತ್ತೊಂದು ಅವಕಾಶ

ಕಾಳ ಧನಿಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಅವಕಾಶ ನೀಡುವ ಸಾಧ್ಯತೆಗಳು ಕಂಡುಬರುತ್ತಿವೆ. ಗುರುವಾರ ರಾತ್ರಿ ಕೇಂದ್ರ ಸಚಿವ ಸಂಪುಟ ಸಭೆ ನಡೆದ ನಂತರ ಈ ವಿಷಯ ಹರಿದಾಡುತ್ತಿದೆ. ಗರಿಷ್ಠ ಮುಖಬೆಲೆಯ ನೋಟು ರದ್ದು ನಂತರ ರೂ. 2.50 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಅಕೌಂಟುಗಳಿಗೆ ಜಮೆ ಮಾಡಿದವರಿಗೆ ತೆರಿಗೆಯ ಮೇಲೆ ಶೇ. 200 ರಷ್ಟು ದಂಡ (ಒಟ್ಟು ಶೇ. 90) ವಿಧಿಸುತ್ತಾರೆ, ವಿಚಾರಣೆಯನ್ನೂ ಎದುರಿಸಬೇಕಿರುತ್ತದೆ ಎಂದು ಇದುವರೆಗೂ ಎಚ್ಚರಿಸಲಾಗುತ್ತಿತ್ತು.

ಹೆಚ್ಚು ದಂಡ ಹಾಗೂ ವಿಚಾರಣೆ ಎದುರಿಸುವ ಹೆದರಿಕೆಯಿಂದ, ಆದಷ್ಟು ಕಪ್ಪು ಹಣವನ್ನು ಬದಲಾಯಿಸಿಕೊಂಡು ಉಳಿದಿದ್ದು ಕಳೆದುಕೊಳ್ಳಲು ಕಾಳ ಧನಿಕರು ಸಿದ್ಧವಾಗುತ್ತಿದ್ದಾರೆ. ತಮ್ಮ ಬಳಿ ಇರುವ ದೊಡ್ಡ ಮೊತ್ತದ ಹಳೆಯ ನೋಟು ಹರಿದು ಬಿಸಾಡುವುದು, ಸುಡುವುದು ಮಾಡುತ್ತಿದ್ದಾರೆ. ಆದರೆ ಸರ್ಕಾರದ ಉದ್ದೇಶ ಅದಲ್ಲ, ಕಪ್ಪುಹಣವೆಲ್ಲಾ ಹೊರಬರಬೇಕು ಎಂಬುದು. ಹೀಗಾಗಿ ಹೊಸ ಪ್ರಸ್ತಾವನೆಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ.

ಈಗ ಹೊಸ ಪ್ರಸ್ತಾವನೆಗಳ ಪ್ರಕಾರ ರೂ. 2.50 ಲಕ್ಷ ದಾಟಿದ, ಸೂಕ್ತ ದಾಖಲೆ ತೋರಿಸದ ಹಣಕ್ಕೆ ಶೇ. 60 ರವರೆಗೆ ತೆರಿಗೆ ಹಾಕಿದರೆ ಸಾಕು ಎಂದು ಕೇಂದ್ರ ಚಿಂತನೆ ನಡೆಸಿದೆ. ಈ ಕುರಿತು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ಆದರೆ ಸಂಸತ್ ಕಲಾಪಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ ಎನ್ನಲಾಗುತ್ತಿದೆ.

Related Post

error: Content is protected !!