ಚೀನಾದಲ್ಲಿ ಭಾರೀ ಭೂಕಂಪ, 100ಕ್ಕೂ ಹೆಚ್ಚು ಸಾವು – News Mirchi

ಚೀನಾದಲ್ಲಿ ಭಾರೀ ಭೂಕಂಪ, 100ಕ್ಕೂ ಹೆಚ್ಚು ಸಾವು

ಬೀಜಿಂಗ್: ಚೀನಾದ ಜಿಂಜಿಯಾಂಗ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಭಾರೀ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ರಷ್ಟು ದಾಖಲಾಗಿದೆ. ಚೀನಾ ಗಡಿ ಪ್ರದೇಶವಾದ ಕಜಕಿಸ್ತಾನದಲ್ಲೂ ಭೂಕಂಪನವಾಗಿದೆ. ಮಂಗಳವಾರ ರಾತ್ರಿ ಸಿಚುವಾನ್ ವಲಯದಲ್ಲಿ 7 ತೀವ್ರತೆಯೊಂದಿಗೆ ಭೂಕಂಪನ ಸಂಭವಿಸಿದೆ.

ಈ ಭೂಕಂಪದಲ್ಲಿ ಸುಮಾರು 100ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವುದಾಗಿ ಅಂದಾಜಿಸಲಾಗಿದ್ದು, ಸಾವಿರಾರು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಗೊಂಡವರಲ್ಲಿ 30ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಸುಮಾರು 600 ಜನ ಅಗ್ನಿಶಾಮಕ ಸಿಬ್ಬಂದಿ, ಸೈನಿಕರು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.

Click for More Interesting News

Loading...
error: Content is protected !!