ಹಳಿ ತಪ್ಪಿದ ದುರಂತೋ ಎಕ್ಸ್ ಪ್ರೆಸ್ – News Mirchi

ಹಳಿ ತಪ್ಪಿದ ದುರಂತೋ ಎಕ್ಸ್ ಪ್ರೆಸ್

ಮಹಾರಾಷ್ಟ್ರದಲ್ಲಿ ನಾಗಪುರ-ಮುಂಬೈ ನಡುವೆ ಓಡುವ ದುರಂತೋ ಎಕ್ಸ್ ಪ್ರೆಸ್ ಮಂಗಳವಾರ ಮುಂಜಾನೆ ಟಿಟ್ವಾಲಾ ಎಂಬಲ್ಲಿ ಹಳಿ ತಪ್ಪಿದೆ. ಸಂಪೂರ್ಣ ಹವಾನಿಯಂತ್ರಿತ ರೈಲಾದ ದುರಂತೋ ಇಂಜಿನ್, ಒಂಬತ್ತು ಬೋಗಿಗಳು ಹಳಿ ತಪ್ಪಿವೆ, ಆದರೆ ಈ ಘಟನೆಯಲ್ಲಿ ಯಾವುದೇ ಸಾವು ನೋವುಗಳು ಉಂಟಾಗಿಲ್ಲ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ. ಕಳೆದ 10 ದಿನಗಳಲ್ಲಿ ದೇಶದಲ್ಲಿ ರೈಲು ಹಳಿ ತಪ್ಪಿದ ಘಟನೆ ನಡೆದಿರುವುದು ಇದು ನಾಲ್ಕನೆಯದು.

ಘಟನೆ ಹಿನ್ನೆಲೆಯಲ್ಲಿ ಘಟನೆ ನಡೆದ ಸ್ಥಳಕ್ಕೆ ಧಾವಿಸಿದಿ ಸಿಬ್ಬಂದಿ, ರಕ್ಷಣಾ ಕಾರ್ಯಚರಣೆ ಕೈಗೊಂಡರು. ಆದರೆ ಅಷ್ಟರಲ್ಲಿ ಮಳೆ ಶುರುವಾಗಿದ್ದರಿಂದ ನಿಲ್ಲಿಸಲಾಯಿತು. ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

Contact for any Electrical Works across Bengaluru

Loading...
error: Content is protected !!