ಆಸ್ತಿಗಾಗಿ 7 ವರ್ಷದ ತಮ್ಮನನ್ನು ಕೊಂದ ಅಣ್ಣ – News Mirchi

ಆಸ್ತಿಗಾಗಿ 7 ವರ್ಷದ ತಮ್ಮನನ್ನು ಕೊಂದ ಅಣ್ಣ

ಉತ್ತರಪ್ರದೇಶ: ಕುಟುಂಬದ ಆಸ್ತಿಯನ್ನು ಒಬ್ಬನೇ ಅನುಭವಿಸುವ ದುರುದ್ದೇಶದಿಂದ ಅಣ್ಣನೇ ತನ್ನ 7 ವರ್ಷದ ತಮ್ಮನನ್ನು ಕೊಂದ ಘಟನೆ ಉತ್ತರಪ್ರದೇಶದ ಭವಾನಿಪುರ ಗ್ರಾಮದಲ್ಲಿ ನಡೆದಿದೆ.

ಅಂಕಿತ್(22) ಎಂಬ ಯುವಕ ತಾನೇ ತನ್ನ ತಮ್ಮ ಆದಿತ್ಯ(7)ನನ್ನು ಆಸ್ತಿಗಾಗಿ ಇಬ್ಬರ ಇನ್ನಿಬ್ಬರ ಸಹಾಯದಿಂದ ಬಾವಿಗೆ ತಳ್ಳಿ ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಆದಿತ್ಯ ಮನೆಗೆ ವಾಪಸಾಗಿರಲಿಲ್ಲ. ಹೀಗಾಗಿ ಮನೆಯವರು ಹುಡುಕಾಟ ನಡೆಸಿದಾಗ ಬಾವಿಯೊಂದರಲ್ಲಿ ಆದಿತ್ಯನ ಶವ ದೊರಕಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಇನ್ನಿಬ್ಬರ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ

Loading...

Leave a Reply

Your email address will not be published.