ಹೊಸ ಸೈಬರ್ ಕ್ರೈಂ ಪೊಲೀಸ್ ಠಾಣೆ ಆರಂಭ, 5 ಜಿಲ್ಲೆಗಳಿಗೆ ಅನುಕೂಲ

ಗೃಹ ಸಚಿವ ಜಿ ಪರಮೇಶ್ವರ್ ರವರು ನಗರದ ಮಿಷನ್ ರಸ್ತೆಯಲ್ಲಿರುವ ಐಜಿಪಿ ಕಚೇರಿಯಲ್ಲಿ ಹೊಸ ಸೈಬರ್ ಕ್ರೈಂ ಪೊಲೀಸ್ ಠಾಣೆ (CCPS) ಯನ್ನು ಉದ್ಘಾಟಿಸಿದರು. ಇದು ರಾಜ್ಯದ ಏಳನೇ ಸೈಬರ್ ಕ್ರೈಂ ಠಾಣೆಯಾಗಿದ್ದು, ಇದರಿಂದ ಐದು ಜಿಲ್ಲೆಗಳಿಗೆ ಅನುಕೂಲವಾಗುತ್ತದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಕೋಲಾರ ಜಿಲ್ಲೆಗಳು ಮತ್ತು ಕೆಜಿಎಫ್ ಜನತೆ ಸೈಬರ್ ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ದಾಖಲಿಸಬಹುದು. ಇಲ್ಲಿಯೇ ದೂರು ದಾಖಲಿಸಬೇಕೆಂದೇ ಇಲ್ಲ, ಜನ ತಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ಸೈಬರ್ ಕ್ರೈಮ್ ಗೆ ಸಂಬಂಧಿಸಿದ ದೂರು ದಾಖಲಿಸಿದರೆ, ನಂತರ ಅಂತಹ ದೂರುಗಳು ಸೈಬರ್ ಕ್ರೈಂ ಪೊಲಿಸ್ ಠಾಣೆಗೆ ವರ್ಗಾಯಿಸಲಾಗುತ್ತದೆ.

ಉದ್ಘಾಟನೆಗೂ ಮುನ್ನ 6 ಜಿಲ್ಲೆಗಳ ಎಸ್ಪಿ ಗಳ ಸಭೆ ಕರೆದಿದ್ದ ಗೃಹ ಸಚಿವ ಪರಮೇಶ್ವರ್, ಅಪರಾಧ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಗಮನ ಹರಿಸಲು ಸೂಚಿಸಿದರು. ಸೈಬರ್ ಅಪರಾಧಿಗಳು ದಿನದಿಂದ ದಿನಕ್ಕೆ ಅಪ್ಡೇಟ್ ಅಗುತ್ತಿದ್ದು, ನಮ್ಮ ಪೊಲೀಸರೂ ಸೈಬರ್ ಅಪರಾಧ ನಿಯಂತ್ರಣ ವಿಚಾರದಲ್ಲಿ ಅಪ್ಡೇಟ್ ಆಗುತ್ತಿದ್ದಾರೆ. ಅವರಿಗೆ ಸರ್ಕಾರ ಅಗತ್ಯವಿರುವ ಎಲ್ಲಾ ನೆರವು ನೀಡಿದೆ ಎಂದು ಪರಮೇಶ್ವರ್ ಹೇಳಿದರು.

Related News

Comments (wait until it loads)
Loading...
class="clear">