ದೇಶದ 8 ದೊಡ್ಡ ಮತ್ತು ಉತ್ತಮ ಶಾಪಿಂಗ್ ಮಾಲ್‌ಗಳು ಇವೇ |News Mirchi

ದೇಶದ 8 ದೊಡ್ಡ ಮತ್ತು ಉತ್ತಮ ಶಾಪಿಂಗ್ ಮಾಲ್‌ಗಳು ಇವೇ

ಶಾಪಿಂಗ್ ಮಾಲ್ ಗಳು ಆಕರ್ಷಕ ಮತ್ತು ಸುಂದರ ಸ್ಥಳಗಳಾಗಿರುತ್ತವೆ. ಇಲ್ಲಿ ನಮಗೆ ಅಗತ್ಯವಿರುವ ವಸ್ತುಗಳನ್ನೆಲ್ಲಾ ಖರೀದಿಸುವ ಸೌಲಭ್ಯವಿರುತ್ತದೆ. ಸಿನಿಮಾ ನೋಡಲು, ತಿಂಡಿ ತಿನ್ನಲು, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು… ಹೀಗೆ ಇಂತದ್ದಿಲ್ಲ ಎನ್ನುವಂತಿಲ್ಲ, ಕೈತುಂಬಾ ದುಡ್ಡಿರಬೇಕಷ್ಟೇ.

ದೇಶದ 8 ಅತಿ ದೊಡ್ಡ ಮತ್ತು ಉತ್ತಮ ಶಾಪಿಂಗ್ ಮಾಲ್‌ಗಳು ಹೀಗಿವೆ.

ಲುಲು ಇಂಟರ್ನ್ಯಾಷನಲ್ ಷಾಪಿಂಗ್ ಮಾಲ್, ಕೊಚ್ಚಿ

ಈ ಸುಂದರ ಮಾಲ್ ಕೇರಳದ ಕೊಚ್ಚಿಯ ಹೃದಯ ಭಾಗದಲ್ಲಿದೆ. ಈ ಶಾಪಿಂಗ್ ಮಾಲ್ 10 ನೇ ಮಾರ್ಚ್ 2013 ರಂದು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು. ಈ ಮಾಲ್ ನ ಛಾವಣಿಯು ಸೂರ್ಯನ ಬೆಳಕಿನಲ್ಲಿ ಹೊಳೆಯುವುದು ವಿಶೇಷ. ಈ ಮಾಲ್ ಬರೋಬ್ಬರಿ 39,00,000 ಚದರ ಅಡಿ ಪ್ರದೇಶವನ್ನು ಹೊಂದಿದೆ.

ಈ ಶಾಪಿಂಗ್ ಮಾಲ್ 5 ಮಹಡಿಗಳನ್ನು, 9 ಪರದೆಗಳ ಪಿವಿಆರ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರ, 3 ರೆಸ್ಟೋರೆಂಟ್, ಪಾರ್ಟಿ ಹಾಲ್‌ಗಳು, ಒಳಾಂಗಣ ಕ್ಲೈಂಬಿಂಗ್, ಸವಾರಿ, 5D ಸಿನಿಮಾ, ಐಸ್ ಸ್ಕೇಟಿಂಗ್ ಮತ್ತು ಆರ್ಕೇಡ್ ಆಟಗಳನ್ನು ಹೊಂದಿದೆ. ವಿದೇಶಿ ವಿನಿಮಯ ಕೌಂಟರ್ ಗಳು ಸಹ ಮಾಲ್ ನಲ್ಲಿ ಇವೆ.

ಫೀನಿಕ್ಸ್ ಮಾರ್ಕೆಟ್ ಸಿಟಿ, ಮುಂಬೈ

ಫೀನಿಕ್ಸ್ ಮಾರ್ಕೆಟ್ ಸಿಟಿ ಮಹಾರಾಷ್ಟ್ರದ ಅತಿ ದೊಡ್ಡ ಶಾಪಿಂಗ್ ಮಾಲ್ ಆಗಿದೆ. ಈ ಮಾಲ್ 40,50,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. 600 ಅಂಗಡಿಗಳು, 14 ಸಿನಿಮಾ ಪರದೆಗಳು, 20 ಕ್ಕೂ ಹೆಚ್ಚು ರೆಸ್ಟೋರೆಂಟ್ ಮತ್ತು ವಿದೇಶಿ ವಿನಿಮಯ ಕೌಂಟರ್ ಗಳನ್ನು ಹೊಂದಿದೆ.

ಫೀನಿಕ್ಸ್ ಮಾರ್ಕೆಟ್ ಸಿಟಿ, ಚೆನ್ನೈ

ಸುಂದರ ಮಾಲ್ ಚೆನೈನ ವೆಲಾಚೆರಿಯಲ್ಲಿದೆ. ತಮಿಳುನಾಡಿನಲ್ಲಿ ಇದೇ ಅತಿ ದೊಡ್ಡ ಮಾಲ್ ಆಗಿದೆ. ಈ ಮಾಲ್ 24,00,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ 300 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ. ಹೋಟೆಲ್ ಕೊಠಡಿಗಳು, ವಿದೇಶಿ ವಿನಿಮಯ ಕೌಂಟರ್, ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್, ಕ್ಲಬ್ ಡಿಸ್ಕೋ ಮತ್ತು ಆಹಾರ ಪ್ರಿಯರಿಗೆ ಉತ್ತಮ ಸೌಲಭ್ಯಗಳನ್ನು ಹೊಂದಿದೆ.

ಮಂತ್ರಿ ಸ್ಕ್ವೇರ್ ಮಾಲ್, ಬೆಂಗಳೂರು
ಈ ಮಾಲ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿದೆ. 17,00,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಮಾಲ್ ಒಳಗೆ ನಡೆಯುವ ವಿವಿಧ ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳು ಅತ್ಯಂತ ಪ್ರಸಿದ್ಧವಾಗಿದೆ. ಇಲ್ಲಿ 240 ಚಿಲ್ಲರೆ ಮಳಿಗೆಗಳು ಮತ್ತು 11,000 ಕ್ಕೂ ಹೆಚ್ಚು ಬ್ರಾಂಡೆಡ್ ಮಳಿಗೆಗಳು ಮತ್ತು ಐನಾಕ್ಸ್ ಚಿತ್ರಮಂದಿರಗಳಿವೆ.

ಫೀನಿಕ್ಸ್ ಮಾರ್ಕೆಟ್ ಸಿಟಿ, ಪುಣೆ

ಈ ಮಾಲ್ ಜನರಿಗೆ ಒಂದು ಶಾಪಿಂಗ್ ಸ್ವರ್ಗವಾಗಿದೆ. ಇದು 34,00,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಫುಡ್ ಪ್ಲಾಝಾಗಳು, ವಿದೇಶಿ ವಿನಿಮಯ ಕೌಂಟರ್ ಗಳು, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಹೊಂದಿದೆ.

ಝಡ್ ಸ್ಕ್ವೇರ್ ಶಾಪಿಂಗ್ ಮಾಲ್, ಕಾನ್ಪುರ್, ಉತ್ತರಪ್ರದೇಶ

ಈ ಮಾಲ್ ಉತ್ತರ ಪ್ರದೇಶದ ದೊಡ್ಡ ಶಾಪಿಂಗ್ ಮಾಲ್ ಆಗಿದೆ. ಇದು 15,00,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಮಾಲ್ ಬಹಳ ವಿಶಾಲವಾದ ಮತ್ತು ಸ್ಥಳೀಯ ಜನರಿಗೆ ವ್ಯಾಪಾರ ಕೇಂದ್ರವಾಗಿದೆ. ಫುಡ್ ಕೋರ್ಟ್, ಹೋಟೆಲ್ಗಳು, ಐಷಾರಾಮಿ ಮತ್ತು ಬ್ರಾಂಡೆಡ್ ಉತ್ಪನ್ನಗಳು, ಜನಪ್ರಿಯ ಚಿಲ್ಲರೆ ಮಳಿಗೆಗಳನ್ನು, ಮತ್ತು ಚಿತ್ರಮಂದಿರಗಳನ್ನು ಇಲ್ಲಿ ಕಾಣಬಹುದು.

ಗ್ರೇಟ್ ಇಂಡಿಯಾ ಪ್ಲೇಸ್ ಶಾಪಿಂಗ್ ಮಾಲ್, ನೊಯ್ಡಾ
ಈ ಮಾಲ್ ನೋಯ್ಡಾದ ಹೃದಯ ಭಾಗದಲ್ಲಿ ಇದೆ. ಇದು ಅತ್ಯುತ್ತಮ ಮನರಂಜನಾ ಸ್ಥಳ ಮತ್ತು ಮನರಂಜನಾ ಪಾರ್ಕ್ ಆಗಿದೆ. ಇದು 15,00,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಬಿಗ್ ಸಿನೆಮಾಸ್ ನ 6 ಸ್ಕ್ರೀನ್ ಗಳು, 200ಕ್ಕೂ ಹೆಚ್ಚು ಫುಡ್ ಕೋರ್ಟ್, ಅಂತಾರಾಷ್ಟ್ರೀಯ ಬ್ರ್ಯಾಂಡ್ಗಳು, ಕಿರಾಣಿ ಮತ್ತು ಎಲೆಕ್ಟ್ರಾನಿಕ್ಸ್ ಮಳಿಗೆಗಳಿವೆ.

ಸಿಟಿವಾಕ್ ಸೆಲೆಕ್ಟ್ ನವದೆಹಲಿ
ಈ ಮಾಲ್ ದೆಹಲಿಯಲ್ಲಿ ದೊಡ್ಡ ಶಾಪಿಂಗ್ ಮಾಲ್ ಆಗಿದ್ದು 13,00,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. 130 ಕ್ಕೂ ಹೆಚ್ಚು ಚಿಲ್ಲರೆ ಮಳಿಗೆಗಳು ಇಲ್ಲಿವೆ. 600 ಬ್ರಾಂಡೆಡ್ ಮಳಿಗೆಗಳು, ಪಿವಿಆರ್ ಸಿನಿಮಾಸ್, ಸರ್ವೀಸ್ ಅಪಾರ್ಟ್‌ಮೆಂಟ್ಸ್ ಇವೆ. ಈ ಮಾಲ್ ಅನ್ನು ಮೂರು ಜೋನ್ ಗಳಗಾಗಿ ವಿಂಗಡಿಸಿದ್ದಾರೆ. ಸಾಂಪ್ರದಾಯಿಕ ಕುಟುಂಬಗಳಿಗೆ, ಯುವ ಸಮುದಾಯಕ್ಕೆ ಮತ್ತು ಕಾರ್ಯಕ್ರಮಗಳು, ಪ್ರದರ್ಶನಗಳಿಗಾಗಿ.

Loading...
loading...
error: Content is protected !!