ವಾಮಾಚಾರ ಶಂಕೆ, ಮಹಿಳೆಯ ಸಜೀವ ದಹನ

ಪಾಟ್ನಾ: ವಾಮಾಚಾರ ಮಾಡಿ ತನ್ನ ಮಗನನ್ನು ಕೊಂದಿದ್ದಾಳೆಂಬ ಅನುಮಾನದಿಂದ ಮಹಿಳೆಯನ್ನು ಸಜೀವ ದಹನ ಮಾಡಿದ ಘಟನೆ ಬಿಹಾರದಲ್ಲಿ ನಡೆದಿದೆ. ರಮಾವತಿ(80) ಎಂಬ ಮಹಿಳೆಯನ್ನು ಮನೆಯಿಂದ ಹೊರಗೆಳೆದು ತಂದು ಸೀಮೆ ಎಣ್ಣೆ ಸುರಿದು ಮಂಗಳವಾರ ಪಕ್ಕದ ಮನೆಯ ಚಿಕ್ರು ಮಹಲ್ದಾರ್ ಎಂಬ ವ್ಯಕ್ತಿ ಬೆಂಕಿ ಹಚ್ಚಿ ಕೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಯ 12 ವರ್ಷದ ಮಗ ಹಾವು ಕಡಿದು ಸಾವನ್ನಪ್ಪಿದ್ದು, ತನ್ನ ಮಗನ ಸಾವಿಗೆ ಈ ಮಹಿಳೆ ವಾಮಾಚಾರ ಮಾಡಿದ್ದೇ ಕಾರಣ ಎಂದು ಅನುಮಾನಿಸಿದ್ದ. ತನ್ನ ಮಗನನ್ನು ಪುನಃ ಬದುಕಿಸಬೇಕೆಂದು ಒತ್ತಾಯಿಸಿದಾಗ, ಅದು ತನ್ನ ಕೈಲಾಗದು, ನನಗೆ ಯಾವ ವಾಮಾಚಾರವೂ ಗೊತ್ತಿಲ್ಲ ಎಂದು ಮಹಿಳೆ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡ ವ್ಯಕ್ತಿ ಅಕೆಗೆ ಬೆಂಕಿ ಹಚ್ಚಿದ್ದಾನೆ.

ಗ್ರಾಮದಲ್ಲಿ ಈ ಮಹಿಳೆ ವಾಮಾಚಾರ ಮಾಡಿ ಜನರನ್ನು ಕೊಲ್ಲುವ ಮತ್ತು ಬದುಕಿಸುವ ಸಾಮರ್ಥ್ಯವಿದೆ ಎಂದು ಜನ ನಂಬಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಹಲವು ಬಾರಿ ಈಕೆ ಹಲ್ಲೆಗೊಳಗಾಗಿದ್ದಳು.

ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಇನ್ನೂ ಐದು ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.

Loading...

Leave a Reply

Your email address will not be published.

error: Content is protected !!