ಮುಚ್ಚಲಿವೆಯಂತೆ 800 ಇಂಜಿನಿಯರಿಂಗ್ ಕಾಲೇಜುಗಳು – News Mirchi

ಮುಚ್ಚಲಿವೆಯಂತೆ 800 ಇಂಜಿನಿಯರಿಂಗ್ ಕಾಲೇಜುಗಳು

ಮುಂದಿನ ಶೈಕ್ಷಣಿಕ ವರ್ಷದಿಂದ ಭಾರತದಾದ್ಯಂತ 800 ಇಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚುತ್ತಿರುವುದಾಗಿ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್(ಎಐಸಿಟಿಇ) ಚೇರ್ಮನ್ ಅನಿಲ್ ದತ್ತಾತ್ರೇಯ ಅವರು ಹೇಳಿದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ದಾಖಲಾತಿ ಇಲ್ಲದಿರುವುದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕಾಲೇಜುಗಳು ವಿಫಲವಾಗುತ್ತಿರುವುದು ಮುಂತಾದ ಕಾರಣಗಳಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಹಲವು ಕಾಲೇಜುಗಳ ಪರವಾನಗಿಗಳನ್ನು ರದ್ದುಗೊಳಿಸುತ್ತಿರುವುದಾಗಿ ಅವರು ಹೇಳಿದರು.

ಎಐಸಿಟಿಇ ನಿಯಮಗಳನ್ನು ಪಾಲಿಸಲಾಗದೆ ಪ್ರತಿ ವರ್ಷ ಸುಮಾರು 150 ಕಾಲೇಜುಗಳು ಸ್ವಯಂ ನಿರ್ಧಾರ ಕೈಗೊಂಡು ಮುಚ್ಚುತ್ತಿವೆ ಎಂದು ಅವರು ಹೇಳಿದರು. ಹಲವು ಕಾಲೇಜುಗಳಲ್ಲಿ ಶೇ.30 ಕ್ಕಿಂತಲೂ ಕಡಿಮೆ ದಾಖಲಾತಿಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

Loading...