81 ಲಕ್ಷ ಆಧಾರ್ ಸಂಖ್ಯೆಗಳು ನಿಷ್ಕ್ರಿಯ, ನಿಮ್ಮ ಆಧಾರ್ ಚೆಕ್ ಮಾಡಿಕೊಳ್ಳಿ ಹೀಗೆ

ದೇಶಾದ್ಯಂತ ಇಲ್ಲಿಯವರೆಗೂ 81 ಲಕ್ಷ ಆಧಾರ್ ಸಂಖ್ಯೆಗಳನ್ನು ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ(ಯುಐಡಿಎಐ) ನಿಷ್ಕ್ರಿಯಗೊಳಿಸಿದೆ. ನಕಲಿ ಗುರುತಿನ ಚೀಟಿಗಳನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆಧಾರ್ ಎನ್ರೋಲ್ಮೆಂಟ್ ರೆಗ್ಯುಲೇಷನ್ 2016ರ ಸೆಕ್ಷನ್ 27, 28 ರ ಪ್ರಕಾರ ಆಧಾರ್ ಲೈಫ್ ಸೈಕಲ್ ಮ್ಯಾನೇಜ್ಮೆಂಟ್ ನಿಯಮಗಳ ಅಡಿಯಲ್ಲಿ ಈ ಆಧಾರ್ ಸಂಖ್ಯೆಗಳನ್ನು ರದ್ದುಗೊಳಿಸಿದ್ದಾರೆ.

ನಿಮ್ಮ ಆಧಾರ್ ಸಂಖ್ಯೆ ಸಕ್ರಿಯವಾಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನೀವು ಈ ಕೆಳಗಿನ ಸೂಚನೆ ನೋಡಿ…

ಆಧಾರ್ ಸಂಖ್ಯೆ ಪರಿಶೀಲಿಸಲು ಕೆಳಗೆ ಕಾಣಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ…

ಆಧಾರ್ ವೆಬ್ಸೈಟ್ ಗೆ ಇಲ್ಲಿ ಕ್ಲಿಕ್ಕಿಸಿ

ವೆಬ್ಸೈಟ್ ಓಪನ್ ಆದ ನಂತರ ನಿಮ್ಮ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ಅದರಲ್ಲಿ ಎಂಟರ್ ಮಾಡಿ. ಕೆಳಗೆ ಕಾಣುವ ಸೆಕ್ಯೂರಿಟಿ ಕೋಡ್ ಅನ್ನು ಬಾಕ್ಸ್ ನಲ್ಲಿ ಎಂಟರ್ ಮಾಡಿ, ವೆರಿಫೈ ಬಟನ್ ಒತ್ತಿ. ನಿಮ್ಮ ಆಧಾರ್ ಸಂಖ್ಯೆ ಸಕ್ರಿಯವಾಗಿದ್ದಲ್ಲಿ ಪರದೆ ಮೇಲೆ ಕನ್ಫರ್ಮೇಷನ್ ಸಂದೇಶ ಕಾಣಿಸುತ್ತದೆ. ಅದರಲ್ಲಿ ನಿಮ್ಮ ವಯಸ್ಸು, ನಿಮ್ಮ ರಾಜ್ಯ, ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆ ಕೊನೆಯ ಮೂರು ಸಂಖ್ಯೆಗಳು ಕಾಣುತ್ತವೆ.