ಡಿಸೆಂಬರ್ ವೇಳೆಗೆ 946 ಗ್ರಾಮಗಳಿಗೆ ನಿರಂತರ ವಿದ್ಯುತ್ |News Mirchi

ಡಿಸೆಂಬರ್ ವೇಳೆಗೆ 946 ಗ್ರಾಮಗಳಿಗೆ ನಿರಂತರ ವಿದ್ಯುತ್

ಡಿಸೆಂಬರ್ ಅಂತ್ಯದ ವೇಳೆಗೆ 946 ಗ್ರಾಮಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 187 ವಿಧಾನಸಭಾ ಕ್ಷೇತ್ರಗಳಿಂದ 946 ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಯೋಜನೆಯಡಿ ನಿರಂತರ ವಿದ್ಯುತ್ ಸರಬರಾಜು ಮಾಡಲು ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಪ್ರತಿ ಗ್ರಾಮಕ್ಕೆ ರೂ.25 ಲಕ್ಷದಿಂದ 40 ಲಕ್ಷದವರೆಗೆ ವೆಚ್ಚ ಮಾಡಲಾಗುವುದು ಎಂದು ಅವರು ತಿಳಿಸಿದರು. ಈ ಯೋಜನೆಗೆ ಒಟ್ಟು 236 ರಿಂದ 378 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರತಿ ವಿಧಾನಸಭೆಯಲ್ಲಿ 5 ಮಾದರಿ ಗ್ರಾಮಗಳನ್ನು ರೂಪಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳು ರಾಜ್ಯ ಬಡ್ಜೆಟ್ ನಲ್ಲಿ ಮಾಡಿದ್ದು, ಇದಕ್ಕಾಗಿ ಈಗಾಗಲೇ ಗ್ರಾಮಗಳನ್ನು ಗುರುತಿಸುವ ಪ್ರಕ್ರಿಯೆ ಮುಗಿದಿದೆ ಎಂದು ಡಿಕೆಶಿ ಹೇಳಿದರು. ಈ ಯೋಜನೆಯಲ್ಲಿ ಗ್ರಾಮಗಳಿಗೆ ಬೆಳಕು ಗ್ರಾಮಗಳು ಎಂದು ಹೆಸರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಈ ಯೋಜನೆಯಲ್ಲಿ ಸೇರಿಸಲು ಎಲ್ಲಾ ಸಂಸದರಿಗೆ ತಮ್ಮ ಕ್ಷೇತ್ರಗಳಿಂದ ಗ್ರಾಮಗಳನ್ನು ಶಿಫಾರಸು ಮಾಡುವಂತೆ ಮನವಿ ಮಾಡಲಾಗಿತ್ತು ಎಂದು ಸಚಿವರು ವಿವರಿಸಿದರು.

ರೂ.228.43 ಕೋಟಿ ವೆಚ್ಚದಲ್ಲಿ 7 ಲಕ್ಷಕ್ಕೂ ಅಧಿಕ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಮನೆಗಳಿಗೆ ವಿದ್ಯುತ್ ನೀಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಕೆಲಸ ಡಿಸೆಂಬರ್ ವೇಳಗೆ ಮುಗಿಯಲಿದೆ ಎಂದು ಸಚಿವರು ಹೇಳಿದರು.

Loading...
loading...
error: Content is protected !!