Warning: preg_match(): Compilation failed: range out of order in character class at offset 33 in /home1/newsmg7m/public_html/wp-content/plugins/json-api/singletons/api.php on line 294
ರಾಜನಾಥ್ ಸಿಂಗ್ ಸ್ಪಷ್ಟನೆಯ ನಂತರ ಮಿಜೋರಾಂ ನಲ್ಲಿ ಬೀಫ್ ಸಂಭ್ರಮ – News Mirchi

ರಾಜನಾಥ್ ಸಿಂಗ್ ಸ್ಪಷ್ಟನೆಯ ನಂತರ ಮಿಜೋರಾಂ ನಲ್ಲಿ ಬೀಫ್ ಸಂಭ್ರಮ

ಐಜ್ವಾಲ್ : ತಿನ್ನುವ ಆಹಾರದ ವಿಷಯದಲ್ಲಿ ಜನರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ, ಅದು ಅವರ ಹಕ್ಕು, ತಾವು ಆಹಾರದ ವಿಷಯದಲ್ಲಿ ಯಾವುದೇ ಷರತ್ತು ವಿಧಿಸುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ ಬೆನ್ನಲ್ಲೇ, ಮಿಜೋರಾಂ ನಲ್ಲಿ ಬೀಫ್ ಪಾರ್ಟಿ ಮಾಡಿ ಸಂಭ್ರಮಿಸಿದರು. ಎಲ್ಲರೂ ಒಂದೆಡೆ ಸೇರಿ ಊಟ ಸೇವಿಸಿದರು. ಇವರಲ್ಲಿ ಅಲ್ಲಿನ ಬಿಜೆಪಿ ನಾಯಕರೂ ಇದ್ದದ್ದು ವಿಶೇಷ.

ಕಸಾಯಿಖಾನೆಗಳಿಗೆ ಪಶುಗಳನ್ನು ಮಾರುವುದನ್ನು ತಡೆಯಲು ಕೇಂದ್ರ ಸರ್ಕಾರ ಕೆಲ ನಿಯಮಗಳನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ, ತಮ್ಮ ಆಹಾರದ ಮೇಲೆ ಈ ನಿಯಮಗಳು ಪ್ರಭಾವ ಬೀರುತ್ತವೆ ಎಂದು ಮಿಜೋರಾಂ ನಲ್ಲಿ ಜನರು ವಿರೋಧಿಸಿದರು. ಹೀಗೆ ವಿರೋಧಿಸಿದವರಲ್ಲಿ ಅಲ್ಲಿನ ಬಿಜೆಪಿ ಮುಖಂಡರೂ ಇದ್ದರು. ಮೇಘಾಲಯದ ಇಬ್ಬರು ಬಿಜೆಪಿ ಮುಖಂಡರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಕ್ಷದ ತೀರ್ಮಾನ ವಿರೋಧಿಸಿ ಪಕ್ಷಕ್ಕೆ ರಾಜೀನಾಮೆ ನೀಡಿ ಹೊರಬಂದರು.[ ಗೋಮಾಂಸ ತ್ಯಜಿಸೋಣ, ಹಿಂದೂಗಳ ಧಾರ್ಮಿಕ ನಂಬಿಕೆಗಳನ್ನು ಗೌರವಿಸೋಣ: ಅಜ್ಮೇರ್ ದರ್ಗಾ ಮುಖ್ಯಸ್ಥ ]

ಈಶಾನ್ಯ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ರಕ್ಷಣಾ ವ್ಯವಸ್ಥೆಗಳ ಕುರಿತು ಚರ್ಚಿಸಲು ರಾಜನಾಥ್ ಸಿಂಗ್ ರಾಜಭವನದಲ್ಲಿ ಕರೆದಿದ್ದ ಸಭೆಯಿಂದ 200 ಮೀಟರ್ ದೂರದಲ್ಲಿ ಈ ಬೀಫ್ ಫೆಸ್ಟ್ ಆಯೋಜಿಸಿದ್ದರು. ಆದರೆ ಈ ಬೀಫ್ ಫೆಸ್ಟ್ ಗೋಮಾಂಸದ ಪ್ರಚಾರಕ್ಕಾಗಿ ಅಲ್ಲ, ಬದಲಿಗೆ ಕೇಂದ್ರದ ನೋಟಿಫಿಕೇಷನ್ ವಿರುದ್ಧ ಒಂದು ಸಣ್ಣ ಪ್ರತಿಭಟನೆ ಎಂದು ಆಯೋಜಕರು ಹೇಳಿದ್ದಾರೆ.

Contact for any Electrical Works across Bengaluru

Loading...
error: Content is protected !!