ಯೋಗಾ ಮೇಲಿನ ನಂಬಿಕೆಯಿಂದ ಈತ ತಿಂದಿದ್ದೇನು ತಿಳಿದರೇ ಶಾಕ್… – News Mirchi

ಯೋಗಾ ಮೇಲಿನ ನಂಬಿಕೆಯಿಂದ ಈತ ತಿಂದಿದ್ದೇನು ತಿಳಿದರೇ ಶಾಕ್…

ಯೋಗಾದಿಂದ ಏನಾದರೂ ಸಾಧಿಸಬಹುದು, ಏನೇ ತಿಂದರೂ ಹೊಟ್ಟೆಯಲ್ಲಿ ಸಲೀಸಾಗಿ ಜೀರ್ಣವಾಗುತ್ತದೆ ಎಂದು ಭಾವಿಸಿದ ವ್ಯಕ್ತಿಯೊಬ್ಬ ಕಬ್ಬಿಣದ ತುಂಡುಗಳು, ಬ್ಲೇಡುಗಳು, ಟ್ಯೂಬ್ ಲೈಟ್ ಚೂರುಗಳನ್ನೂ ಬಿಡದೆ ಹೊಟ್ಟೆಗೆ ಸೇರಿಸಿದ್ದಾನೆ ಭೂಪ. ಇದರಿಂದಾಗಿ ಹಲವು ದಿನಗಳ ನಂತರ ಹೊಟ್ಟೆ ನೋವು ತಾಳಲಾರದೆ ಆಸ್ಪತ್ರೆ ಪಾಲಾಗಿದ್ದಾನೆ. ನಾಲ್ಕು ತಿಂಗಳ ಕಾಲ ದಿನಗಳು ಚಿಕಿತ್ಸೆ ಪಡೆದ ನಂತರ ಈಗ ಆರೋಗ್ಯವಾಗಿದ್ದಾನೆ.

ಸ್ಥಳೀಯವ ಅಶೋಕ್ ವಿಹಾರದ ಶೈಲೇಂದ್ರ ಸಿಂಗ್ (52) ಗೆ ಶರೀರರನ್ನು ಸ್ಕ್ಯಾನ್ ಮಾಡಿದ ವೈದ್ಯರಿಗೆ ಶಾಕ್. ಯೋಗಾ ದಿಂದ ಏನಾದರೂ ಜೀರ್ಣಿಸಿಕೊಳ್ಳುವ ಶಕ್ತಿ ಇದೆ ಎಂದು ನಂಬಿದ್ದ ಶೈಲೇಂದ್ರ ಸಿಂಗ್ ಬ್ಲೇಡುಗಳು, ಟ್ಯೂಬ್ ಲೈಟುಗಳು, ಮುಂತಾದವುಗಳನ್ನು ನುಂಗಿರುವುದು ವೈದ್ಯರಿಗೆ ಹೇಳಿದ್ದ. ಸ್ಕ್ಯಾನ್ ಮಾಡಿದ್ದ ವೈದ್ಯರಿಗೆ ಆತ ಹೇಳಿದ ವಸ್ತುಗಳು ಹೊಟ್ಟೆಯಲ್ಲಿ ಕಾಣಿಸಿದ್ದವು. ಹೀಗಾಗಿ ಕೆಲ ದಿನಗಳ ಕಾಲ ವೈದ್ಯರು ಆತನಿಗೆ ಚಿಕಿತ್ಸೆ ನೀಡಿದರು. ಯಾಂಟಿ ಸೈಕೋಟಿಕ್ ಥೆರಪಿ ಮಾಡಿ ಮೆಡಿಸಿನ್ ನೀಡುತ್ತಾ ಪ್ರತಿ ದಿನ ಪರೀಕ್ಷಿಸುತ್ತಿದ್ದರು. ಕೊನೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಎರಡು ಲೊಹದ ಪ್ಲೇಟ್ ಗಳು, ಆರು ಸೂಜಿಗಳು, ಕೆಲ ಬ್ಲೇಡುಗಳು, ಟ್ಯೂಬ್ ಲೈಟ್ ಗಾಜುಗಳು ಹೊರಗೆ ತೆಗೆದಿರುವುದಾಗಿ ಆರ್.ಎಂ.ಎಲ್ ಆಸ್ಪತ್ರೆಯ ವೈದ್ಯ ಡಾ. ಆರ್.ಪಿ.ಬೆನಿವಾಲ್ ಹೇಳಿದ್ದಾರೆ. ವೈದ್ಯರು ಶ್ರಮ ಫಲಿಸಲು ನಾಲ್ಕು ತಿಂಗಳುಗಳೇ ಬೇಕಾಯಿತು. ಆಸ್ಪತ್ರೆಯಲ್ಲಿದ್ದಷ್ಟು ದಿನ ಶೈಲೇಂದ್ರ ಏನೂ ಆಗೇ ಇಲ್ಲವೆನ್ನುವಂತೆ ಹಾರ್ಮೋನಿಯಂ ನುಡಿಸುತ್ತಾ ಇತರೆ ರೋಗಿಗಳನ್ನು ಸಂತಸಪಡಿಸುತ್ತಿದ್ದನಂತೆ.

ಸೇನೆಯಲ್ಲಿ ಸೇರುವ ಬಯಕೆಯಿತ್ತು. ಆದರೆ ನನಗೆ ಕರುಳಿನಲ್ಲಿ ಸಮಸ್ಯೆಯಿದೆ, ಹಾಗಾಗಿ ಬದುಕುವುದು ಕಷ್ಟ ಎಂದು ತಿಳಿದು ಆಸೆ ಕೈಬಿಟ್ಟಿದ‍್ದೆ, ಆದರೆ ಇಲ್ಲಿಯವರೆಗೂ ಏನೂ ಆಗಿಲ್ಲ. ಯೋಗಾದಿಂದ ಏನಾದರೂ ಸಾಧ್ಯ ಎಂದು ಕೇಳಿದ್ದೆ. ಹಾಗಾಗಿ ಸುಮಾರು 9 ವರ್ಷಗಳ ಹಿಂದೆ ಲೋಹ, ಗಾಜಿನ ಚೂರು, ಬ್ಲೇಡು, ಸೂಜಿಗಳನ್ನು ನುಂಗಿದ್ದೆ. ಯೋಗಾದಿಂದಾಗಿ ನಾನು ಇಂದಿಗೂ ಜೀವಂತವಿದ್ದೇನೆ ಎಂದು ಶೈಲೇಂದ್ರ ಸಿಂಗ್ ಹೇಳಿದ್ದಾನೆ.

ಶೈಲೇಂದ್ರ ಸಿಂಗ್ ಅನಕ್ಷರಸ್ಥನೇನಲ್ಲ, ಪದವೀಧರನಾಗಿದ್ದು ಇಂಗ್ಲೀಷ್ ಮತ್ತು ಹಿಂದಿಯನ್ನು ನಿರರ್ಗಳವಾಗಿ ಮಾತನಾಡುತ್ತಾನೆ. ಹಾರ್ಮೋನಿಯಂ ನುಡಿಸುವ ಹವ್ಯಾಸವಿದೆ. ಜೀವನಕ್ಕೆ ಬೈಕ್ ರಿಪೇರಿ ಬಿಡಿಭಾಗಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ.

Loading...