ಎನ್ಕೌಂಟರ್ ವೇಳೆ ಜೀವಂತ ಸೆರೆ ಸಿಕ್ಕ ಉಗ್ರ ಅದಿಲ್

ಜಮ್ಮೂ ಕಾಶ್ಮೀರ: ಶುಕ್ರವಾರ ಸಂಜೆಯಿಂದ ಶೋಪಿಯಾನ್ ನಲ್ಲಿ ನಡೆಯುತ್ತಿರುವ ಎನ್ಕೌಂಟರ್ ಗೆ ಸಂಬಂಧಿಸಿದಂತೆ ಉಗ್ರನೊಬ್ಬ ಸಜೀವವಾಗಿ ಭದ್ರತಾಪಡೆಗಳಿಗೆ ಸಿಕ್ಕಿಬಿದ್ದಿದ್ದಾನೆ. ತುಂಬಾ ದಿನಗಳ ನಂತರ ಎನ್ಕೌಂಟರ್ ವೇಳೆ ಒಬ್ಬ ಉಗ್ರ ಜೀವಂತವಾಗಿ ಸೆರೆಸಿಕ್ಕಿದ್ದಾನೆ. ಮತ್ತೊಬ್ಬ ಉಗ್ರನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಸಿಕ್ಕ ಉಗ್ರನನ್ನು ಅದಿಲ್ ಎಂದು ಗುರುತಿಸಲಾಗಿದೆ.

ಸೆರೆ ಸಿಕ್ಕ ಉಗ್ರ ಅದಿಲ್ ಇತ್ತೀಚೆಗಷ್ಟೇ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ನಲ್ಲಿ ಸೇರಿದ್ದಾಗಿ ಹೇಳಿದ್ದಾನೆ. ಹತನಾದ ಉಗ್ರನನ್ನು ತಾರಿಕ್ ಅಹ್ಮದ್ ಎಂದು ಗುರುತಿಸಲಾಗಿದೆ. ಶೋಪಿಯಾನ್ ನಲ್ಲಿನ ಬಾರ್ಬಗ್ ಎಂಬ ಗ್ರಾಮದಲ್ಲಿ ಉಗ್ರರ ಚಲನವಲನದ ಮಾಹಿತಿ ಪಡೆದ ಭದ್ರತಾಪಡೆಗಳು ಮತ್ತು ಪೊಲೀಸರು ಶೋಧಕಾರ್ಯ ನಡೆಸಿದಾಗ ಈ ಎನ್ಕೌಂಟರ್ ನಡೆದಿದೆ.