ಲ್ಯಾಂಡ್ ಆಗುವ ವೇಳೆ ವಿಮಾನದಿಂದ ಜಿಗಿದ ಮಹಿಳೆ

ಹ್ಯೂಸ್ಟನ್: ಮಹಿಳೆಯೊಬ್ಬಳು ಲ್ಯಾಂಡ್ ಆಗುತ್ತಿದ್ದ ವಿಮಾನದಿಂದ ಏಕಾಏಕಿ ಜಿಗಿದ ಘಟನೆಯೊಂದು ನಡೆದಿದೆ. ಯುನೈಟೆಡ್ ಏರ್ಲೈನ್ಸ್ ನ 1892 ವಿಮಾನದಲ್ಲಿ ಈ ಘಟನೆ ನಡೆದಿದೆ.

ನ್ಯೂ ಆರ್ಲಿಯನ್ಸ್ ನಿಂದ ಹ್ಯೂಸ್ಟನ್ ಗೆ ಹೊರಟಿದ್ದ ಬುಷ್ ಇಂಟರ್ ಕಾಂಟಿನೆಂಟಲ್ ನಿಲ್ದಾಣದ ರನ್ ವೇ ಮೇಲೆ ಲ್ಯಾಂಡ್ ಆಗುತ್ತಿರುವ ವೇಳೆ ಮಹಿಳೆಯೊಬ್ಬಳು ವಿಮಾನದ ತುರ್ತು ನಿರ್ಗಮನದ ಮೂಲಕ ಜಿಗಿದಿದ್ದಾಳೆ.

ಏರ್ ಪೋರ್ಟ್ ಆಪರೇಟಿಂಗ್ ಏರಿಯಾ ಬಳಿ ಜಿಗಿದಾಗ ಅಧಿಕಾರಿಗಳು ಕೂಡಲೇ ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ ಮಹಿಳೆ ಸೇರಿದಂತೆ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಆಕೆ ಸಿಬ್ಬಂದಿಗಾಗಲೀ, ಸಹ ಪ್ರಯಾಣಿಕರಿಗಾಗಲೀ ಏನೂ ಹೇಳದೆ ತುರ್ತು ನಿರ್ಗಮನದ ಮೂಲಕ ಜಿಗಿದಿದ್ದಾಳೆ ಎಂದು ಇತರ ಪ್ರಯಾಣಿಕರು ಹೇಳಿದ್ದಾರೆ.

Related News

loading...
error: Content is protected !!