ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಕಡ್ಡಾಯ? |News Mirchi

ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಕಡ್ಡಾಯ?

ಒಬ್ಬರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಡ್ರೈವಿಂಗ್ ಲೈಸೆನ್ಸ್ ಪಡೆಯುವುದನ್ನು ತಪ್ಪಿಸಲು ಹೊಸದಾಗಿ ನೀಡುವ ಮತ್ತು ನವೀಕರಣಗೊಳ್ಳುವ ಎಲ್ಲಾ ಡ್ರೈವಿಂಗ್ ಲೈಸೆನ್ಸ್ ಗಳಿಗೆ ಆಧಾರ್ ಕಡ್ಡಾಯ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಈ ವರ್ಷದ ಅಕ್ಟೋಬರ್ ವೇಳೆಗೆ ಇದು ಕಾರ್ಯರೂಪಕ್ಕೆ ಬರಲಿದೆ ಎನ್ನಲಾಗಿದೆ.

ಆಧಾರ್ ನಲ್ಲಿ ದಾಖಲಾಗಿರುವ ಬಯೋಮೆಟ್ರಿಕ್ ವಿವರಗಳು ಕ್ರಿಮಿನಲ್ ಅಪರಾಧಗಳು, ನಕಲಿ ಗುರುತಿನ ಪುರಾವೆ ಮುಂತಾದವುಗಳಿಗೆ ಕಡಿವಾಣ ಹಾಕುತ್ತವೆ. ಅರ್ಜಿದಾರನ ಗುರುತಿನ ಪುರಾವೆಗೆ ಕೇವಲ ಆಧಾರ್ ಒಂದು ದಾಖಲೆಯಿದ್ದರೆ ಸಾಕಾಗುತ್ತದೆ.

ಅಧಿಕೃತ ಮೂಲಗಳ ಪ್ರಕಾರ ಎಲ್ಲಾ ಆರ್‌ಟಿ‌ಒ ಸಿಸ್ಟಮ್‌ಗಳಲ್ಲಿ ಕೆಲವು ಅಗತ್ಯ ಬದಲಾವಣೆಗಳನ್ನು ಮಾಡಲಾಗುತ್ತದೆ. ಪ್ರತಿ ಆರ್‌ಟಿಒ ಡ್ರೈವಿಂಗ್ ಲೈಸೆನ್ಸ್ ಗಳ ಕೇಂದ್ರ ಡೇಟಾಬೇಸ್ ಗೆ ಹೋಗಿ ಅರ್ಜಿದಾರ ಈ ಹಿಂದೆ ಲೈಸೆನ್ಸ್ ಪಡೆದಿದ್ದನೇ ಎಂಬುದನ್ನು ಪತ್ತೆ ಹಚ್ಚಲು ಅನುಕೂಲವಾಗುತ್ತದೆ.

Loading...
loading...
error: Content is protected !!