ಜಾಹೀರಾತಿಗೆ ಕೇಜ್ರಿವಾಲ್ ಸರ್ಕಾರ ಕೊಟ್ಟಿದ್ದು 30 ಲಕ್ಷ, ಸಾಲ ನೀಡಿದ್ದು 3 ವಿದ್ಯಾರ್ಥಿಗಳಿಗೆ!

ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ವಿರುದ್ಧ ಮಾಜಿ ಆಪ್ ಮುಖಂಡ ಯೋಗೇಂದ್ರ ಯಾದವ್ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ಯೋಜನೆಯಡಿ ವಿದ್ಯಾರ್ಥಿಗಳಿಗೆ ಕೊಡಲಾಗುವ ಸಾಲಗಳ ಜಾಹೀರಾತುಗಳಿಗೆ ಆಪ್ ಸರ್ಕಾರ 30 ಲಕ್ಷ ಖರ್ಚು ಮಾಡಿದೆ. ಆದರೆ ಇದುವರೆಗೆ ಮೂರು ವಿದ್ಯಾರ್ಥಿಗಳಿಗೆ ಮಾತ್ರ ಕೇವಲ 3.15 ನಿಗಧಿಪಡಿಸಿ ಲಕ್ಷ ಸಾಲ ನೀಡಿದ್ದಾರೆ ಎಂದು ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.

ಡಿಸೆಂಬರ್ 30 2016 ರ ವೇಳೆಗೆ ದೆಹಲಿಯಲ್ಲಿ ಸಾಲಕ್ಕಾಗಿ ಸಲ್ಲಿಕೆಯಾದ 405 ಅರ್ಜಿಗಳಲ್ಲಿ 97 ಜನರಿಗೆ ಸಾಲ ಮಂಜೂರು ಮಾಡಲಾಗಿದೆ. ಆದರೆ ದೆಹಲಿ ಸರ್ಕಾರ ಕೇವಲ ಮೂರು ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರದ ಕೌಶಲ್ಯ ಖಾತರಿ ಯೋಜನೆಯಡಿ ಸಾಲ ಮಂಜೂರು ಮಾಡಿದ್ದು, ಉಳಿದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಲ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಯೋಗೇಂದ್ರ ಯಾದವ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಲು ಕೇಜ್ರಿವಾಲ್ ಸರ್ಕಾರ ನಿರಾಕರಿಸಿದೆ.

ಒಂದು ವರ್ಷದಲ್ಲಿ ದೆಹಲಿಯಲ್ಲಿ 500 ಹೊಸ ಶಾಲೆ ತೆರೆಯುವುದಾಗಿ ಕೇಜ್ರಿವಾಲ್ ಘೋಷಿಸಿದ್ದರು. ಆದರೆ 2015-16 ರ ಅಂತ್ಯದ ವೇಳೆಗೆ ರಾಜಧಾನಿಯಲ್ಲಿ ಕೇವಲ ನಾಲ್ಕು ಶಾಲೆಗಳು ಹೆಚ್ಚಾಗಿವೆ ಮತ್ತು ಒಟ್ಟಾರೆ ದೆಹಲಿಯಲ್ಲಿ ಹಿಂದಿನ ವರ್ಷಕ್ಕಿಂತ ಎರಡು ಶಾಲೆಗಳು ಕಡಿಮೆಯಾಗಿವೆ. ಹಾಗೆಯೇ ಒಂದು ವರ್ಷದಲ್ಲಿ 20 ಹೊಸ ಕಾಲೇಜುಗಳನ್ನು ಆರಂಭಿಸುವುದಾಗಿ ಕೇಜ್ರಿವಾಲ್ ಹೇಳಿದ್ದರು. ಆದರೆ ಈಗ 85 ಇದ್ದ ಕಾಲೇಜುಗಳ ಸಂಖ್ಯೆ 84 ಕ್ಕೆ ಇಳಿದಿದೆ ಎಂದು ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.

Loading...

Leave a Reply

Your email address will not be published.

error: Content is protected !!