ಪಕ್ಷದ ಕಛೇರಿ ತೆರವುಗೊಳಿಸುವಂತೆ ಅರವಿಂದ್ ಕೇಜ್ರಿವಾಲ್’ಗೆ ಲೆ.ಗವರ್ನರ್ ಆದೇಶ – News Mirchi

ಪಕ್ಷದ ಕಛೇರಿ ತೆರವುಗೊಳಿಸುವಂತೆ ಅರವಿಂದ್ ಕೇಜ್ರಿವಾಲ್’ಗೆ ಲೆ.ಗವರ್ನರ್ ಆದೇಶ

ನವದೆಹಲಿ: ದೆಹಲಿ ಮುನಿಸಿಪಲ್ ಚುನಾವಣೆಗೂ ಮುನ್ನವೇ ಅರವಿಂದ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಹೊಡೆತ ಬಿದ್ದಿದೆ. ದೆಹಲಿಯಲ್ಲಿನ ಆಪ್ ಕಛೇರಿಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ತೆರವು ಮಾಡಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಸಿಎಂ ಕೇಜ್ರಿವಾಲ್ ರವರಿಗೆ ಆದೇಶಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ರವರನ್ನು ಸಂಪರ್ಕಿಸದೇ ಕೇಜ್ರಿವಾಲ್ ಸರ್ಕಾರ ಪಕ್ಷಕ್ಕಾಗಿ ಜಮೀನು ಮಂಜೂರು ಮಾಡಿತ್ತು. ಆದರೆ ಈ ಹಿಂದಿನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ನಜೀಬ್ ಜಂಗ್, ಆಪ್ ಸರ್ಕಾರದ ಅಧಿಕಾರ ದುರುಪಯೋಗದ ಕುರಿತು ತನಿಖೆಗೆ ಮೂವರು ಸದಸ್ಯರ ಒಂದು ಕಮಿಟಿಯನ್ನು ರಚಿಸಿದ್ದರು. ಕೇಂದ್ರಾಡಳಿತ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಮತ್ತು ಲೆಫ್ಟಿನೆಂಟ್ ಗವರ್ನರ್ ಇಬ್ಬರೂ ಸೇರಿ ಕೆಲಸ ಮಾಡಬೇಕಿರುತ್ತದೆ, ಆದರೆ ಆಪ್ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ರವರನ್ನು ಕಡೆಗಣಿಸಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿತ್ತು.

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕಾಗಿ ಕಛೇರಿ ಕಟ್ಟಡಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ರವರನ್ನು ದೂರವಿಟ್ಟು ನೇರವಾಗಿ ನಿರ್ಧಾರ ತೆಗೆದುಕೊಂಡಿದ್ದರಿಂದ, ಈ ಭೂಮಿ ಹಂಚಿಕೆ ಅಮಾನ್ಯವಾಗುತ್ತದೆ, ಹಾಗೆಯೇ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಗೆ ವಸತಿ ಕಟ್ಟಡ ಹೇಗೆ ಹಂಚಿಕೆ ಮಾಡುತ್ತೀರಿ ಎಂದು ಶುಂಗ್ಲೂ ಕಮಿಟಿ ಇತ್ತೀಚೆಗೆ ಪ್ರಶ್ನಿಸಿತ್ತು. ಸರ್ಕಾರದ ತೀರ್ಮಾನಗಳ ಕುರಿತು ಸಮಿತಿ ಸುಮಾರು 100 ಪುಟಗಳ ವರದಿ ಸಿದ್ಧಪಡಿಸಿದೆ. ಲೆಫ್ಟಿನೆಂಟ್ ಗವರ್ನರ್ ಅನುಮತಿ ಇಲ್ಲದೆ ಸಚಿವರು ವಿದೇಶೀ ಪ್ರವಾಸ, ವಕೀಲರ ನೇಮಕ ವಿಷಯಗಳಲ್ಲಿ ಆಪ್ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನೂ ಪ್ರಶ್ನಿಸಿದೆ. ಏನಾದರೂ ಅಕ್ರಮಗಳು ನಡೆದಿರುವುದು ಶುಂಗ್ಲೂ ಕಮಿಟಿ ವರದಿಯಲ್ಲಿ ಬಂದರೆ ಕೇಜ್ರಿವಾಲ್ ಸೇರಿದಂತೆ ಸಚಿವರು ಕ್ರಿಮಿನಲ್ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಮಿತಿ ರಚಿಸಿದ್ದ ಅಂದಿನ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಎಚ್ಚರಿಸಿದ್ದರು.

Contact for any Electrical Works across Bengaluru

Loading...
error: Content is protected !!