ಸ್ಪರ್ಧಿಸುವುದಿಲ್ಲ, ಆದರೆ ಬಿಜೆಪಿ ವಿರುದ್ಧ ಪ್ರಚಾರ ನಡೆಸುತ್ತೇವೆ : ಆಪ್

ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಬಿಜೆಪಿ ವಿರುದ್ಧ ಪ್ರಚಾರ ಮಾಡುವುದಾಗಿ ಆಮ್ ಆದ್ಮಿ ಪಕ್ಷ ಸ್ಪಷ್ಟಪಡಿಸಿದೆ. ಈ ಸಂಬಂಧ ಉತ್ತರ ಪ್ರದೇಶ ಚುನಾವಣೆಯಲ್ಲಿ ತಾವು ಕ್ರಿಯಾಶೀಲ ಪ್ರಚಾರ ನಡೆಸುತ್ತೇವೆ ಎಂದು ಪಕ್ಷ ಹೇಳಿದೆ.

ತಾವು ಸ್ಪರ್ಧಿಸುತ್ತಿರುವ ಪಂಜಾಬ್, ಗೋವಾ ಚುನಾವಣೆಗಳು ಮುಗಿಯುತ್ತಿದ್ದಂತೆ, ತಾವು ಉತ್ತರ ಪ್ರದೇಶ ಚುನಾವಣೆ ಮೇಲೆ ಕೇಂದ್ರೀಕರಿಸಲಿದ್ದೇವೆ, ಪಕ್ಷದ ಪ್ರಮುಖ ನಾಯಕರು, ಸ್ಟಾರ್ ಪ್ರಚಾರಕರ ಮೂಲಕ ಬಿಜೆಪಿ ಬಣ್ಣ ಬಯಲು ಮಾಡುತ್ತೇವೆ ಎಂದು ಆಪ್ ಅಧಿಕೃತ ವಕ್ತಾರ ವೈಭವ್ ಮಹೇಶ್ವರಿ ಹೇಳಿದ್ದಾರೆ.

ಬಿಜೆಪಿಯ ನಿಜ ಬಣ್ಣ ಏನೆಂದು ಜನರಿಗೆ ವಿವರಿಸಿ, ಆ ಪಕ್ಷ ಅಧಿಕಾರಕ್ಕೆ ಬಂದರೆ ಏನು ನಡೆಯಬಹುದು ಎಂಬುದನ್ನು ವಿವರಿಸುತ್ತೇವೆ ಎಂದು ಪಕ್ಷ ಹೇಳಿದೆ.

Taking its fight against BJP to newer pastures, Aam Aadmi Partyled by Arvind Kejriwal will “actively campaign” against the saffron party in the Uttar Pradesh assembly polls, though it will not enter the electoral arena.

Related News

Loading...

Leave a Reply

Your email address will not be published.

error: Content is protected !!