ಉದ್ಯಮಿಯಿಂದ ಹಣ ದರೋಡೆ ಮಾಡಿ ಸಿಕ್ಕಿಬಿದ್ದ ಆಪ್ ನಾಯಕ – News Mirchi

ಉದ್ಯಮಿಯಿಂದ ಹಣ ದರೋಡೆ ಮಾಡಿ ಸಿಕ್ಕಿಬಿದ್ದ ಆಪ್ ನಾಯಕ

ಉದ್ಯಮಿಯೊಬ್ಬರಿಂದ ರೂ.25 ಲಕ್ಷ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದು, ಬಂಧಿತರಲ್ಲಿ ಆಮ್ ಆದ್ಮಿ ಪಕ್ಷದ ಯುವ ವಿಭಾಗದ ನಾಯಕನೂ ಸೇರಿದ್ದಾನೆ.

ಜಫ್ರಾಬಾದ್ ಆಪ್ ಯುವ ವಿಭಾಗದ ಅಧ್ಯಕ್ಷ ನಜೀಬ್(25), ಜಿತೇಂದರ್ (27), ಮೊಹಮದ್ ಯೂಸುಫ್(19), ನವೀದ್(22) ಬಂಧಿತರು.

ಮಾರ್ಚ್ 12 ರಂದು ಮೌಜಪುರದಲ್ಲಿ ಉದ್ಯಮಿಯ ಬಳಿಯಿದ್ದ ರೂ.25 ಲಕ್ಷ ನಗದು, ಒಂದು ಮೊಬೈಲ್ ಮತ್ತು ಕೆಲ ದಾಖಲೆಗಳನ್ನು ಆರೋಪಿಗಳು ದೋಚಿದ್ದರು. ನಂತರ ಪರಾರಿಯಾಗುವ ಸಂದರ್ಭದಲ್ಲಿ ನದೀಮ್ ಎಂಬಾತ ಸಿಕ್ಕಿಬಿದ್ದಿದ್ದ, ಆನಂತರ ಉಳಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ರೂ.1,60,000 ನಗದು, ಒಂದು ಪಿಸ್ತೂಲು, ಕದ್ದ ಅಪಾಚೆ ಬೈಕ್ ಮುಂತಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ 20 ಕ್ಕೂ ಹೆಚ್ಚು ದರೋಡೆಗಳನ್ನು ನಡೆಸಿರುವುದಾಗಿ ಅರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಕುರಿತು ತನಿಖೆ ಮುಂದುವರೆಯುತ್ತಿದೆ.

Loading...

Leave a Reply

Your email address will not be published.