ಫಾರೂಖ್ ಅಬ್ದುಲ್ಲಾ ಸವಾಲು ಸ್ವೀಕರಿಸಿ ತ್ರಿವರ್ಣ ದ್ವಜ ಹಾರಿಸಿದ ಶಿವಸೇನೆ

ಜಮ್ಮೂ ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರ ಸವಾಲನ್ನು ಜಮ್ಮೂ ಕಾಶ್ಮೀರದ ಶಿವಸೇನೆ ಘಟಕ ಸ್ವೀಕರಿಸಿದ್ದು, ಶ್ರೀನಗರದ ಐತಿಹಾಸಿಕ ಲಾಲ್ ಚೌಕದಲ್ಲಿ ಬುಧವಾರ ತ್ರಿವರ್ಣ ದ್ವಜ ಹಾರಿಸಿ ಫಾರೂಕ್ ಗೆ ಉತ್ತರ ನೀಡಿದೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಾಷ್ಟ್ರದ್ವಜ ಹಾರಿಸುವ ಮುನ್ನ, ಐತಿಹಾಸಿಕ ಲಾಲ್ ಚೌಕದಲ್ಲಿ ಹಾರಿಸುವ ಧೈರ್ಯ ಇದೆಯಾ?. ಅದು ನಿಮ್ಮಂದಾಗದ ಕೆಲಸ, ಆದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದ್ವಜ ಹಾರಿಸುವ ಮಾತನಾಡುತ್ತೀರಿ ಎಂದು ಜಮ್ಮೂ ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಕೇಂದ್ರ ಸರ್ಕಾರಕ್ಕೆ ಸವಾಲೆಸೆದಿದ್ದರು.

ನಾವು ರಾಷ್ಟ್ರದ್ವಜವನ್ನು ಹಾರಿಸಲು ಮುಂಜಾನೆ ಲಾಲ್ ಚೌಕ ತಲುಪಿದೆವು. ದ್ವಜ ಹಾರಿಸುತ್ತಿದ್ದಂತೆ ಪೊಲೀಸರು ನಮ್ಮನ್ನು ವ್ಯಾನ್ ಗಳಲ್ಲಿ ಠಾಣೆಗೆ ಕರೆದೊಯ್ದರು. ನಂತರ ನಾವು ಡಿಜಿಪಿಯವರ ಜೊತೆ ಮಾತನಾಡಿ, ನಮ್ಮ ಉದ್ದೇಶವನ್ನು ತಿಳಿಸಿದೆವು. ನಂತರ ಪೊಲೀಸರು ಸೂಕ್ತ ಸಿದ್ಧತೆಗಳೊಂದಿಗೆ ಲಾಲ್ ಚೌಕಕ್ಕೆ ಕರೆದೊಯ್ದರು. ಅಲ್ಲಿ ನಾವು ಮತ್ತೊಮ್ಮೆ ರಾಷ್ಟ್ರದ್ವಜವನ್ನು ಹಾರಿಸಿದೆವು ಎಂದು ಜಮ್ಮೂ ಕಾಶ್ಮೀರ ಶಿವಸೇನೆ ಪ್ರಧಾನ ಕಾರ್ಯದರ್ಶಿ ಮನೀಶ್ ಸಾಹ್ನಿ ಹೇಳಿದ್ದಾರೆ.

Get Latest updates on WhatsApp. Send ‘Subscribe’ to 8550851559