ಭಾರತಕ್ಕೂ ಬರಲಿದೆ ಫೇಸ್ಬುಕ್ ನ ಈ ಅದ್ಭುತ ಫೀಚರ್ – News Mirchi

ಭಾರತಕ್ಕೂ ಬರಲಿದೆ ಫೇಸ್ಬುಕ್ ನ ಈ ಅದ್ಭುತ ಫೀಚರ್

ಸಾಮಾಜಿಕ ತಾಣಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾ, ಹೆಚ್ಚು ಡಾಟಾ ಖರ್ಚು ಮಾಡುತ್ತಿರುವವವರಿಗೆ ಫೇಸ್ಬುಕ್ ಅದ್ಭುತ ಫೀಚರ್ ಪರಿಚಯಿಸಲಿದೆ. “ಫೈಂಡ್ ವೈಫೈ” ಎಂಬ ಫೀಚರ್ ಮೂಲಕ ಉಚಿತ ವೈಫೈ ಎಲ್ಲಿದೆಯೋ ಎಂದು ನಿಮಗೆ ಫೇಸ್ಬುಕ್ಕೇ ಹೇಳಿಬಿಡುತ್ತದೆ. ಇದರ ಮೂಲಕ ಉಚಿತ ವೈಫೈ ಅನ್ನು ಫೇಸ್ಬುಕ್ ಬಳಕೆದಾರರು ಬಳಸಿಕೊಳ್ಳಬಹುದು.

ಈಗಾಗಲೇ ಈ ಫೀಚರ್ ಅನ್ನು ಆಯ್ದ ದೇಶಗಳಲ್ಲಿ ಐಒಎಸ್ ಮೊಬೈಲ್ ಬಳಕೆದಾರರಿಗೆ ಕಳೆದ ವರ್ಷದಿಂದ ನೀಡಲಾಗಿದೆ. ಸದ್ಯ ಇದನ್ನು ವಿಶ್ವಾದ್ಯಂತ ಎಲ್ಲರಿಗೂ, ಅಂದರೆ ಆಂಡ್ರಾಯ್ಡ್ ಬಳಕೆದಾರರಿಗೂ ಈ ಸೇವೆ ಲಭಿಸಲಿದೆ.

ನಾವು ಈ ಸೇವೆಯನ್ನು ಕೆಲ ದೇಶಗಳಲ್ಲಿ ಮಾತ್ರ ಬಿಡುಗಡೆ ಮಾಡಿದ್ದೆವು. ಕೇವಲ ಪ್ರಯಾಣ ಮಾಡುವವರಿಗೆ ಮಾತ್ರವಲ್ಲದೆ, ಡಾಟಾ ಮುಗಿಯುತ್ತದೆ ಎಂದು ಹೆದರುವವರಿಗೂ ಇದನ್ನು ವಿಸ್ತರಿಸುತ್ತಿದ್ದೇವೆ ಎಂದು ಫೇಸ್ಬುಕ್ ಇಂಜಿನಿಯರಿಂಗ್ ಡೈರೆಕ್ಟರ್ ಅಲೆಕ್ಸ್ ಹಿಮೆಲ್ ಹೇಳಿದ್ದಾರೆ.

“ಫೈಂಡ್ ವೈಫೈ” ಫೀಚರ್ ಮೂಲಕ ಸುತ್ತಮುತ್ತ ಎಲ್ಲೆಲ್ಲಿ ವೈಫೈ ಹಾಟ್ ಸ್ಪಾಟ್ ಇರುತ್ತವೆಯೋ, ಅವುಗಳ ಮಾಹಿತಿಯನ್ನು ಪಡೆಯಬಹುದು. ಡಾಟಾ ಸಂಪರ್ಕ ಬಲಹೀನವಾಗಿದ್ದಾಗ, ಕೂಡಲೇ ಹತ್ತಿರದ ಉಚಿತ ವೈಫೈ ಸಂಪರ್ಕಗಳನ್ನು ಸದುಪಯೋಗ ಮಾಡಿಕೊಳ್ಳಬಹುದು ಎಂದು ಅಲೆಕ್ಸ್ ಹೇಳಿದ್ದಾರೆ. ಫೈಂಡ್ ವೈಫೈ ಹಾಟ್ ಸ್ಪಾಟ್ ಗಾಗಿ ಫೇಸ್ಬುಕ್ ಆಪ್ ಅನ್ನು ಓಪನ್ ಮಾಡಿ, “ಮೋರ್” ಟ್ಯಾಬ್ ಕ್ಲಿಕ್ ಮಾಡಿದರೆ, “ಫೈಂಡ್ ವೈಫೈ” ಫೀಚರ್ ಕಾಣಿಸುತ್ತದೆ. ಅದನ್ನು ಸಕ್ರಿಯಗೊಳಿಸಿದರೆ ಸಾಕು, ಮ್ಯಾಪ್ ನಲ್ಲಿ ಹತ್ತಿರದಲ್ಲಿರುವ ಹಾಟ್ ಸ್ಪಾಟ್ ಗಳನ್ನು ಬಳಕೆದಾರರು ಬಳಸಿಕೊಳ್ಳಬಹುದು.

Loading...