ಜಯಲಲಿತಾ ವಾರಸುದಾರ ನಟ ಅಜಿತ್?

ಚೆನ್ನೈ: ಜಯಲಲಿತಾ ವಾರಸುದಾರನಾಗಿ ಚಿತ್ರ ನಟ ಅಜಿತ್ ಹೆಸರು ಕೇಳಿಬರುತ್ತಿದೆ. ರಾಜಕಿಯದಲ್ಲಿ ತನ್ನ ವಾರಸುದಾರನಾಗಿ ಅಜಿತ್ ಅವರನ್ನು ಜಯಲಲಿತಾ ಈ ಹಿಂದೆಯೇ ಆಯ್ಕೆ ಮಾಡಿದ್ದರೆಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಚಿತ್ರ ನಟ ಅಜಿತ್ ಜಯಲಲಿತಾ ರವರನ್ನು ಅಮ್ಮಾ ಎಂದೇ ಕರೆಯುತ್ತಾರೆ. ಪೊಯೆಸ್ ಗಾರ್ಡನ್ ಗೆ ನೇರವಾಗಿ ಪ್ರವೇಶವಿರುವ ಕೆಲವೇ ವ್ಯಕ್ತಗಳಲ್ಲಿ ಅಜಿತ್ ಕೂಡಾ ಒಬ್ಬರು. ಜಯಾ ಸಾವಿನ ನಂತರ ಅಣ್ಣಾಡಿಎಂಕೆ ಹರಿದು ಹಂಚಿ ಹೋಗದಂತೆ, ಕರುಣಾನಿಧಿಯವರ ಡಿಎಂಕೆ ಗೆ ಪ್ರಬಲ ಸ್ಪರ್ಧೆ ನೀಡಬಲ್ಲ ವ್ಯಕ್ತಿಯನ್ನು ಅಜಿತ್ ರಲ್ಲಿ ಜಯಾ ಕಂಡುಕೊಂಡಿದ್ದರು.

ತಮಿಳುನಾಡಿನಲ್ಲಿ ಜನಪ್ರಿಯರಾದವರಲ್ಲಿ ರಜನಿಕಾಂತ್ ನಂತರದ ಸ್ಥಾನದಲ್ಲಿರುವುದು ಅಜಿತ್. ಈ ವಿಷಯವನ್ನು ಜಯಲಲಿತಾ ಪಕ್ಷದ ಮುಖಂಡರಲ್ಲಿಯೂ ಚರ್ಚಿಸಿದ್ದರು ಎನ್ನಲಾಗಿದೆ. ಜಯಾ ನಿಧನದ ನಂತರ ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಮುಂದುವರೆಯಲಿದ್ದು, ಮುಂದಿನ ಚುನಾವಣೆ ವೇಳೆಗೆ ಅಜಿತ್ ರವರನ್ನು ಮುಂಚೂಣಿಗೆ ತರಬೇಕು, ಅಲ್ಲಿಯವರೆಗೂ ಪನ್ನೀರ್ ಸೆಲ್ವಂ ಅಜಿತ್ ಗೆ ಬೆನ್ನೆಲುಬಾಗಿ ನಿಲ್ಲಲಿದ್ದಾರೆ ಎನ್ನುತ್ತಿದ್ದಾರೆ.

Related News

Comments (wait until it loads)
Loading...
class="clear">