fb_img_1478519447669

ನೀರುಪಾಲಾಗಿದ್ದ ಉದಯ್ ಮೃತದೇಹ ಪತ್ತೆ

ಬೆಂಗಳೂರು: ಮಾಸ್ತಿಗುಡಿ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಪಾಲಾಗಿದ್ದ ಕನ್ನಡ ಚಿತ್ರ ನಟರಲ್ಲಿ ಒಬ್ಬರಾದ ಉದಯ್ ಅವರ ಶವ ಇಂದು ಪತ್ತೆಯಾಗಿದೆ. ಶವದ ಮರಣೋತ್ತರ ಪರೀಕ್ಷೆಯನ್ನು ಸ್ಥಳದಲ್ಲೇ ನಡೆಸಲಾಗುತ್ತದೆ ಎನ್ನಲಾಗುತ್ತಿದೆ. ಮತ್ತೊಬ್ಬ ನಟ ಅನಿಲ್ ಮೃತದೇಹದ ಶೋಧ ಕಾರ್ಯ ಇನ್ನೂ ಮುಂದುವರೆದಿದೆ.

ಮೂರು ದಿನಗಳ ಹಿಂದೆ ಮಾಸ್ತಿಗುಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣ ವೇಳೆ ಹೆಲಿಕಾಪ್ಟರ್ ನಿಂದ ಜಲಾಶಯದ ನೀರಿಗೆ ಹಾರಿದ್ದ ಇಬ್ಬರು ಸಾಹಸ ಕಲಾವಿದರು ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

Related Post

error: Content is protected !!