ಮಾಸ್ತಿಗುಡಿ ದುರಂತ: ಅನಿಲ್ ಮೃತದೇಹ ಪತ್ತೆ

ಬೆಂಗಳೂರು: ತಿಪ್ಪಗೊಂಡನಹಳ್ಳಿ ಜಲಾಶಯದ ಪಾಲಾಗಿದ್ದ ಸಾಹಸ ಕಲಾವಿದ ಅನಿಲ್ ಮೃತದೇಹವನ್ನು ಇಂದು ಮುಂಜಾನೆ ಹೊರತೆಗೆಯಲಾಗಿದೆ. ಮೂರು ದಿನಗಳ ಹಿಂದೆ ಚಿತ್ರಿಕರಣ ವೇಳೆ ನೀರಿನಲ್ಲಿ ಮುಳುಗಿ ಉದಯ್ ಮತ್ತು ಅನಿಲ್ ಇಬ್ಬರು ಸಾಹಸ ಕಲಾವಿದರು ಮೃತಪಟ್ಟಿದ್ದರು. ಸಾಕಷ್ಟು ಹುಡುಕಾಟದ ಬಳಿಕ ನಿನ್ನೆ ಉದಯ್ ಮೃತದೇಹ ಪತ್ತೆಯಾಗಿತ್ತು. ದುಃಖದ ಸಂಗತಿಯೆಂದರೆ ಅನಿಲ್ ಮೃತದೇಹದ ಶೋಧ ಕಾರ್ಯ ನಡೆಸುವಾಗ ಯಲ್ಲಯ್ಯ ಎಂಬಾತ ನೋಡುತ್ತಾ ಜಾರಿಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸುಮಾರು 300 ಪೊಲೀಸ್ ಸಿಬ್ಬಂದಿ, ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಪಾಂಡಿಚೆರಿಯಿಂದ ಬಂದಿದ್ದ ಈಜು ತಜ್ಞರು ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Loading...

Leave a Reply

Your email address will not be published.

error: Content is protected !!