ಜಗ್ಗೇಶ್ ಪುತ್ರನಿಗೆ ಚೂರಿ ಇರಿತ, ಆಸ್ಪತ್ರೆಗೆ ದಾಖಲು – News Mirchi
We are updating the website...

ಜಗ್ಗೇಶ್ ಪುತ್ರನಿಗೆ ಚೂರಿ ಇರಿತ, ಆಸ್ಪತ್ರೆಗೆ ದಾಖಲು

ಬೆಂಗಳೂರು: ನವರಸನಾಯಕ ಜಗ್ಗೇಶ್ ಹಿರಿಯ ಪುತ್ರ ಗುರುರಾಜ್ ಅವರಿಗೆ ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಆರ್.ಟಿ.ನಗರದಲ್ಲಿ ನಡೆದಿದೆ. ಮಗನನ್ನು ಶಾಲೆಗೆ ಬಿಟ್ಟು ಬೈಕಿನಲ್ಲಿ ವಾಪಸಾಗುತ್ತಿದ್ದ ಗುರುರಾಜ್ ಬೈಕನ್ನು ಮತ್ತೊಂದು ಬೈಕ್ ಡಿಕ್ಕಿಹೊಡೆದುದನ್ನು ಪ್ರಶ್ನಿಸಿದ ವೇಳೆ, ಮಾತಿಗೆ ಮಾತು ಬೆಳೆದು ದುಷ್ಕರ್ಮಿಗಳು ಚೂರಿಯಿಂದ ಗುರುರಾಜ್ ತೊಡೆಗೆ ಇರಿದು ಪರಾರಿಯಾಗಿದ್ದಾರೆ ಎಂದು ಜಗ್ಗೇಶ್ ಹೇಳಿದ್ದಾರೆ.

ಪೂರ್ಣಿಮಾ ಆಸ್ಪತ್ರೆಯಲ್ಲಿ ಗುರುರಾಜ್ ಚಿಕಿತ್ಸೆ ಪಡೆಯುತ್ತಿದ್ದು, ಕಾಲಿಗೆ 8 ಹೊಲಿಗೆ ಹಾಕಲಾಗಿದೆ. ಬೆಂಗಳೂರಿನ ಪೊಲೀಸರು ಅಪರಾಧ ನಡೆದ ಕೆಲವೇ ಘಂಟೆಗಳಲ್ಲಿ ಅಪರಾಧಿಗಳನ್ನು ಹಿಡಿಯುವ ಸಾಮರ್ಥ್ಯವುಳ್ಳವರು. ಈಗಾಗಲೇ ವಾಹನದ ಸಂಖ್ಯೆ ಮತ್ತಿತರೆ ವಿವರಗಳನ್ನು ಕಲೆ ಹಾಕಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಜಗ್ಗೇಶ್ ಹೇಳಿದ್ದಾರೆ.

ಇಂತಹ ಘಟನೆಗಳಾದಾಗ ಜನ ಫೋಟೋ ವೀಡಿಯೋ ಮಾಡುವುದನ್ನು ಬಿಟ್ಟು ನೆರವಿಗೆ ಮುಂದಾಗಬೇಕು. ಇಂತಹ ಘಟನೆಗಳು ನಡೆದಾಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರೆ ಅವರನ್ನು ವಿಚಾರಣೆಗೆ ಕರೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟೇ ಹೇಳಿರುವುದರಿಂದ ಜನ ಧೈರ್ಯವಾಗಿ ನೆರವಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

Contact for any Electrical Works across Bengaluru

Loading...
error: Content is protected !!