ಹಿರಿಯ ನಟ ಆರ್.ಎನ್. ಸುದರ್ಶನ್ ವಿಧಿವಶ, ಅಂತಿಮ ದರ್ಶನಕ್ಕೆ ಸಿಗದ ಜಾಗ! |News Mirchi

ಹಿರಿಯ ನಟ ಆರ್.ಎನ್. ಸುದರ್ಶನ್ ವಿಧಿವಶ, ಅಂತಿಮ ದರ್ಶನಕ್ಕೆ ಸಿಗದ ಜಾಗ!

ಕನ್ನಡ ಚಿತ್ರರಂಗದ ಹಿರಿಯ ನಟ ಆರ್.ಎನ್.ಸುದರ್ಶನ್(78) ಅವರು ಇಂದು ಬನ್ನೇರುಘಟ್ಟದ ತಿಲಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಹಳ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನಗುವ ಹೂವು ಎಂಬ ಚಲನ ಚಿತ್ರವನ್ನೂ ಅವರು ನಿರ್ಮಿಸಿದ್ದರು.

ವಿವಿಧ ಭಾಷೆಗಳಲ್ಲಿ ಸುಮಾರು 250 ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. ತಮ್ಮ 21ನೇ ವರ್ಷಕ್ಕೆ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಟರಾಗಿ, ನಿರ್ಮಾಪಕರಾಗಿ ಹಾಗೂ ಗಾಯಕರಾಗಿಯೂ ಅವರು ಗುರುತಿಸಿಕೊಂಡಿದ್ದರು. ಮಠ ಮತ್ತು ವಿಜಯನಗರದ ವೀರಪುತ್ರ ಚಿತ್ರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪ್ರಚಂಡ ಕುಳ್ಳ ಚಿತ್ರದಲ್ಲಿ ಕಿಂಕಿಣಿ ಶರ್ಮ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದರು.

ಸುದರ್ಶನ್ ಅವರ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾನೂನು ನೆಪವೊಡ್ಡಿ ಅನುಮತಿ ನಿರಾಕರಿಸಲಾಗಿದೆ ಎನ್ನಲಾಗುತ್ತಿದ್ದು, ಸಚಿವೆ ಉಮಾಶ್ರೀ ವಿರುದ್ಧ ಕನ್ನಡ ಚಿತ್ರರಂಗದಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ಹಿರಿಯ ನಟ ಶಿವರಾಮ್ ಅವರು ಅಂತಿಮ ದರ್ಶನಕ್ಕೆ ಅನುಮತಿ ನೀಡುವಂತೆ ಸಚಿವೆ ಉಮಾಶ್ರೀ ಅವರ ಬಳಿ ಮನವಿ ಮಾಡಿದ್ದು, ನಿಯಮಗಳ ಹೆಸರಲ್ಲಿ ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಹಲವು ವ್ಯಕ್ತಿಗಳ ಅಂತಿಮ ದರ್ಶನಕ್ಕೆ ಅನಮತಿ ನೀಡಲಾಗಿತ್ತು. ಇದೀಗ ಸುದರ್ಶನ್ ಅವರ ವಿಷಯದಲ್ಲಿ ಮಾತ್ರ ಕಾನೂನು ಅಡ್ಡಿ ಬರುತ್ತದೆಯೇ ಎಂದು ಚಿತ್ರರಂಗದ ಕಲಾವಿದರು ಪ್ರಶ್ನಿಸುತ್ತಿದ್ದಾರೆ.

ಇದೀಗ ಬಂದ ಮಾಹಿತಿ ಪ್ರಕಾರ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಕೊನೆಗೂ ಸಚಿವೆ ಉಮಾಶ್ರೀ ಒಪ್ಪಿಕೊಂಡಿದ್ದಾರೆ ಎಂದು ಸಾ.ರಾ.ಗೋವಿಂದು ಅವರು ಹೇಳಿದ್ದಾರೆ.

Loading...
loading...
error: Content is protected !!