ಕಂಬಳ ಪರ ಜಗ್ಗೇಶ್, ಯಶ್ ಹೇಳಿದ್ದೇನು? – News Mirchi

ಕಂಬಳ ಪರ ಜಗ್ಗೇಶ್, ಯಶ್ ಹೇಳಿದ್ದೇನು?

ಕಂಬಳ ಕ್ರೀಡೆಯ ಮೇಲಿನ ನಿಷೇಧ ತೆರವುಗೊಳಿಸಲು ಒತ್ತಡಗಳು ಹೆಚ್ಚಾಗುತ್ತಿದ್ದು, ಕಂಬಳ ಪರ ಜಗ್ಗೇಶ್, ಯಶ್, ರಕ್ಷಿತ್ ಶೆಟ್ಟಿ ಮುಂತಾದ ಚಿತ್ರರಂಗದ ಮಂದಿಯೂ ಧ್ವನಿಗೂಡಿಸಿದ್ದಾರೆ. ತಮಿಳುನಾಡಿಗೆ ಜಲ್ಲಿಕಟ್ಟು ಹೇಗೋ, ಕರ್ನಾಟಕಕ್ಕೂ ಕಂಬಳ ಹಾಗೆ. ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ, ತಮಿಳಿಗರಂತೆ ನಾವೂ ಒಗ್ಗಟ್ಟಾಗಬೇಕು. ನಮ್ಮ ಹಕ್ಕು, ಸಂಪ್ರದಾಯ, ಅಚರಣೆಗಳನ್ನು ರಕ್ಷಿಸಿಕೊಳ್ಳಬೇಕು. ಯಾರು ಒಪ್ಪದಿದ್ದರೂ ತಲೆಕೆಡಿಸಿಕೊಳ್ಳುವುದಿಲ್ಲ, ನಾನು ಮಾತ್ರ ಕಂಬಳದ ಪರವಾಗಿದ್ದೇನೆ ಎಂದು ನಟ ಜಗ್ಗೇಶ್ ಹೇಳಿದ್ದಾರೆ.

ಮತ್ತೊಬ್ಬ ನಟ ಯಶ್ ಈ ಕುರಿತು ಮಾತನಾಡಿದ್ದು, ಕೋಣಗಳನ್ನು ರೈತರು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ರೈತರು ಮತ್ತು ಅವರ ಸಾಕು ಪ್ರಾಣಿಗಳ ಜೊತೆ ವಿಶೇಷ ಬಾಂಧವ್ಯವಿದೆ. ಕಂಬಳವನ್ಮು ನಿಷೇಧಿಸಿದರೆ ನಮ್ಮ ಗುರುತನ್ನೇ ನಾವು ಕಳೆದುಕೊಂಡಂತೆ ಎಂದು ಹೇಳಿದ್ದಾರೆ.

Sandalwood stars Jaggesh, Rakshit Shetty, Ragini, N Prem, and Yash have raised their voices against the ban on Kambala, a buffalo racing sport.

Loading...

Leave a Reply

Your email address will not be published.