ಕಾಂಗ್ರೆಸ್ ಸೇರುತ್ತಾರಾ ಮಾಲಾಶ್ರೀ, ಸಾಧುಕೋಕಿಲಾ? |News Mirchi

ಕಾಂಗ್ರೆಸ್ ಸೇರುತ್ತಾರಾ ಮಾಲಾಶ್ರೀ, ಸಾಧುಕೋಕಿಲಾ?

ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಯಾ ಪಕ್ಷಗಳು ಈಗಾಗಲೇ ಪ್ರಚಾರ ಆರಂಭಿಸಿದ್ದು, ಚುನಾವಣೆ ಎದುರಿಸಲು ರಣತಂತ್ರಗಳನ್ನು ಹೆಣೆಯುತ್ತಿವೆ. ನಟ ಉಪೇಂದ್ರ ಈಗಾಗಲೇ ತಮ್ಮ ಹೊಸ ಪಕ್ಷದ ಘೋಷಣೆ ಮಾಡಿ ಚುನಾವಣೆ ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.

ಇದೀಗ ಹೊಸ ಸುದ್ದಿ ಏನೆಂದರೆ ನಟಿ ಮಾಲಾಶ್ರೀ ಮತ್ತು ಹಾಸ್ಯ ನಟ ಸಾಧು ಕೋಕಿಲ ರಾಜಕೀಯ ಪ್ರವೇಶ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರಂತೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಅವರು ಆರಿಸಿಕೊಂಡಿದ್ದಾರೆ ಎನ್ನಲಾಗಿದೆ.

ರಾಜಕೀಯ ಪ್ರವೇಶ ಮಾಡಲು ಆಸಕ್ತರಾಗಿರುವ ಈ ಇಬ್ಬರೂ ಈಗಾಗಲೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆಂದು ಕಾಂಗ್ರೆಸ್ ಮೂಲಗಳು ಹೇಳಿರುವುದಾಗಿ ಪಬ್ಲಿಕ್ ಟಿವಿ ವರದಿ ಮಾಡಿದೆ. ಆದರೆ ಸಾಧುಕೋಕಿಲ ಮತ್ತು ಮಾಲಾಶ್ರೀ ಅವರಿಂದ ತಮ್ಮ ರಾಜಕೀಯ ಪ್ರವೇಶ ಹಾಗೂ ಕಾಂಗ್ರೆಸ್ ಸೇರ್ಪಡೆ ಕುರಿತು ಅಧಿಕೃತವಾಗಿ ಯಾವುದೇ ಹೇಳಿಕೆ ಬಂದಿಲ್ಲ.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!