ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಕುರಿತು ಸ್ಪಷ್ಟನೆ ನೀಡಿದ ಎಲ್.ಕೆ.ಅಡ್ವಾಣಿ – News Mirchi

ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಕುರಿತು ಸ್ಪಷ್ಟನೆ ನೀಡಿದ ಎಲ್.ಕೆ.ಅಡ್ವಾಣಿ

ನವದೆಹಲಿ: ರಾಷ್ಟ್ರಪತಿ ಹುದ್ದೆಗೆ ತಮ್ಮ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸ್ಪಷ್ಟನೆ ನೀಡಿದ್ದಾರೆ. ಶುಕ್ರವಾರ ಸಂಸತ್ ಹೊರಗೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ರಾಷ್ಟ್ರಪತಿ ಹುದ್ದೆಯ ರೇಸ್ ನಲ್ಲಿ ತಾವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿಯವರ ಅವಧಿ ಜುಲೈ 24 ರಂದು ಮುಗಿಯಲಿದ್ದು, ಪ್ರಣಬ್ ಮುಖರ್ಜಿಯವರ ನಂತರ ಆ ಸ್ಥಾನವನ್ನು ಅಲಂಕರಿಸುವುದು ಯಾರು ಎಂಬ ಬಗ್ಗೆ ಹಲವು ಹೆಸರುಗಳು ಕೇಳಿಬಂದಿದ್ದವು. ಅವುಗಳಲ್ಲಿ ಎಲ್.ಕೆ.ಅಡ್ವಾಣಿ ಹೆಸರು ಮುಂಚೂಣಿಯಲ್ಲಿತ್ತು.

ಅಡ್ವಾಣಿ ತಮ್ಮ ರಾಜಕೀಯ ಗುರುಗಳು, ಅವರಿಗೆ ಸೂಕ್ತ ಸ್ಥಾನ ನೀಡಿ ಗುರುದಕ್ಷಿಣೆ ಸಲ್ಲಿಸಬೇಕಾದ ಸಮಯ ಬಂದಿದೆ ಎಂದು ಇತ್ತೀಚೆಗೆ ಮೋದಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಎಲ್.ಕೆ.ಅಡ್ವಾಣಿಯವರೇ ಮುಂದಿನ ರಾಷ್ಟ್ರಪತಿ ಎಂಬ ವಾದಗಳಿಗೆ ಬಲ ಬಂದಿತ್ತು. ಶಿವಸೇನೆ ಪ್ರಸ್ತಾಪಿಸಿದ್ದ ಹೆಸರು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೂ ಕೂಡಾ ಈಗಾಗಲೇ ಸ್ಪಷ್ಟನೆ ನೀಡಿದ್ದು, ತಾವು ಆರ್.ಎಸ್.ಎಸ್ ನಲ್ಲೇ ಮುಂದುವುರೆಯುವುದಾಗಿ, ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿ ತಾವಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದರು.

Loading...