ಸ್ಪೋಟಕ ತುಂಬಿದ್ದ ಲಾರಿ ವಶಪಡಿಸಿಕೊಂಡ ಅಫ್ಘನಿಸ್ತಾನ, ಪಾಕ್ ಸೇನೆ ಕೈವಾಡ |News Mirchi

ಸ್ಪೋಟಕ ತುಂಬಿದ್ದ ಲಾರಿ ವಶಪಡಿಸಿಕೊಂಡ ಅಫ್ಘನಿಸ್ತಾನ, ಪಾಕ್ ಸೇನೆ ಕೈವಾಡ

ಪಾಕಿಸ್ತಾನದಿಂದ ಅಫ್ಘನಿಸ್ತಾನಕ್ಕೆ ತೆರಳುತ್ತಿದ್ದ ಲಾರಿಯಲ್ಲಿ ಸಾಗಿಸುತ್ತಿದ್ದ 10 ಟನ್ ಗಳಷ್ಟು ಸುಧಾರಿತ ಸ್ಪೋಟಕವಾದ ಅಮೋನಿಯಂ ನೈಟ್ರೈಟ್ ಅನ್ನು ಅಫ್ಘನಿಸ್ತಾನದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸ್ಪೋಟಕಗಳನ್ನು ಲಾರಿಯಲ್ಲಿನ 200 ಚೀಲಗಳಲ್ಲಿ ಅಡಗಿಸಿ ಅಫ್ಘನಿಸ್ತಾನದ ಘನಿ ಖೇಲಿ ಜಿಲ್ಲೆಗೆ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಪೋಟಕ ಕಳ್ಳ ಸಾಗಣೆಗೆ ಸಂಬಂಧಿಸಿದಂತೆ ಪಾಕ್ ನಾಗರಿಕನಾಗಿರುವ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

  • No items.

ಪಾಕಿಸ್ತಾನ ಸೇನೆಯೇ ಲಾರಿಯಲ್ಲಿ ಸ್ಪೋಟಕಗಳನ್ನು ತುಂಬಿ, ಅವುಗಳು ಕಾಣಿಸದಂತೆ ಗೃಹೋಪಯೋಗಿ ವಸ್ತುಗಳಿಂದ ಮುಚ್ಚಿದ್ದರು ಎಂದು ಬಂಧಿತ ಚಾಲಕ ಹೇಳಿದ್ದಾನೆ.

ಪಾಕಿಸ್ತಾನವು ಉಗ್ರರಿಗೆ ಬೆಂಬಲಿಸುತ್ತಿದೆ ಎಂದು ಅಪ್ಘನಿಸ್ತಾನ ಮೊದಲಿನಿಂದಲೂ ಆರೋಪಿಸುತ್ತಲೇ ಬಂದಿದೆ. ಈ ಹಿಂದೆಯೂ ಹಲವು ಬಾರಿ ಪಾಕ್ ನಿಂದ ಸ್ಪೋಟಕ ರವಾನಿಸುತ್ತಿದ್ದ ಲಾರಿಗಳನ್ನು ಅಪ್ಘನಿಸ್ತಾನ ವಶಪಡಿಸಿಕೊಂಡಿತ್ತು.

Loading...
loading...
error: Content is protected !!