ಲೋಪಗಳುಳ್ಳ 500 ರ ನೋಟು ನಡೆಯುತ್ತೆ…

ಮುದ್ರಣ ಲೋಪಗಳಿರುವ ಕೆಲ ಹೊಸ 500 ಮುಖಬೆಲೆಯ ನೋಟುಗಳು ಗೊಂದಲ ಸೃಷ್ಟಿಸುತ್ತಿವೆ. ನಗದು ಕೊರತೆಯ ಹಿನ್ನೆಲೆಯಲ್ಲಿ ಬೇಗ ಮುದ್ರಿಸುವ ಭರದಲ್ಲಿ ಕೆಲ ಲೋಪಗಳುಂಟಾಗಿವೆ. ಆದರೆ ಈ ಲೋಪಗಳುಳ್ಳ ನೋಟು ಚಲಾವಣೆಯಾಗುತ್ತದೆ ಎಂದು ಹೇಳಿರುವ ಆರ್‌ಬಿಐ ಗೊಂದಲಗಳಿಗೆ ತೆರೆ ಎಳೆದಿದೆ.

ಏನು ಮುದ್ರಣ ಲೋಪಗಳು?
ಕೆಲವು ನೋಟುಗಳಲ್ಲಿ ಮಹಾತ್ಮಾ ಗಾಂಧಿಯ ಮುಖದ ಮೇಲೆ ನೆರಳಿನಂತೆ ಮತ್ತೊಂದು ಮುಖ ಕಾಣಿಸುವುದು, ನೋಟಿನ ಮಧ್ಯದಲ್ಲಿ ಇರುವ ಸೆಕ್ಯುರಿಟಿ ದಾರ ಪಕ್ಕಕ್ಕೆ ಸರಿದಿರುವುದು, ಅಶೋಕ ಚಕ್ರ ಲಾಂಚನ ಪಕ್ಕಕ್ಕೆ ಜರುಗಿರುವುದು ಮುಂತಾದ ಲೋಪಗಳು ಇವೆ. ಇಂತಹ ಲೋಪಗಳುಳ್ಳ ನೋಟು ನಡೆಯುತ್ತವೆ, ಬೇಕಿದ್ದರೆ ಬ್ಯಾಂಕುಗಳಲ್ಲಿ ಅವುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ಹೇಳಿದೆ.

ರದ್ದಾದ ಹಳೇ ನೋಟು ಆರ್.ಬಿ.ಐ ನಲ್ಲಿ ಬದಲಾಯಿಸಿಕೊಳ್ಳಬಹುದು.

ಈಗಾಗಲೇ ಹಳೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳುವುದನ್ನು ನಿಲ್ಲಿಸಿದ್ದೇವೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಪ್ರಕಟಿಸಿದೆ. ಈಗ ರದ್ದಾದ ಹಳೆಯ ನೋಟುಗಳನ್ನು ತಮ್ಮ ಕೌಂಟರ್ ಗಳಲ್ಲಿ ಬದಲಿಸಿಕೊಳ್ಳಬಹುದು ಎಂದು ಆರ್.ಬಿ.ಐ ಹೇಳಿದೆ.