ಉತ್ತರ ಕೊರಿಯಾಗೆ ಬುದ್ದಿ ಕಲಿಸ್ತೀರಾ ಇಲ್ವಾ? ಚೀನಾ ಮತ್ತು ರಷ್ಯಾ ವಿರುದ್ಧ ಅಮೆರಿಕಾ ಕಿಡಿ

View Later

ಉತ್ತರ ಕೊರಿಯಾ ಇತ್ತೀಚೆಗೆ ಒಂದರ ಹಿಂದೊಂದು ಖಂಡಾಂತರ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಿರುವುದಕ್ಕೆ ಅಮೆರಿಕದ ಕೆಂಡವಾಗಿದೆ. ಚೀನಾ ಅಧ್ಯಕ್ಷ ಕಿಮ್ ಜಾಂಗ್ ಉನ್ ವಿಷಯದಲ್ಲಿ ಯೋಚಿಸಿ ಹೆಜ್ಜೆ ಇಡಬೇಕು, ತಾಳ್ಮೆಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದ ಚೀನಾ ಮತ್ತು ರಷ್ಯಾವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದೆ.

ಉತ್ತರ ಕೊರಿಯಾ ಆಕ್ರಮಣಕಾರಿ ನಡೆಯನ್ನು ತಡೆಯುತ್ತೀರಾ ಇಲ್ಲವೇ ಎಂದು ಆ ಎರಡೂ ದೇಶಗಳನ್ನು ಪ್ರಶ್ನಿಸಿದೆ. ಇನ್ನು ಯೋಚಿಸದೆ ಉತ್ತರ ಕೊರಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆ ದೇಶಗಳಿಗೆ ಅಮೆರಿಕಾ ಸೂಚಿಸಿದೆ. ಇಂದು ಉತ್ತರ ಕೊರಿಯಾ ತನ್ನ ಪರಮಾಣು ಕ್ಷಿಪಣಿಯ ಪರೀಕ್ಷೆಯನ್ನು ಜಪಾನ್ ಮೇಲೆ ಹಾದುಹೋಗುವಂತೆ ಪರೀಕ್ಷಿಸಿದ ಹಿನ್ನೆಲೆಯಲ್ಲಿ ಈ ಅಮೆರಿಕಾ ಈ ಎಚ್ಚರಿಕೆ ನೀಡಿದೆ.

ಚೀನಾ ತನ್ನಲ್ಲಿನ ಹೆಚ್ಚಿನ ಪ್ರಮಾಣದ ಇಂಧನವನ್ನು ಉತ್ತರ ಕೊರಿಯಾಕ್ಕೆ ಸರಬರಾಜು ಮಾಡುತ್ತಿದೆ. ರಷ್ಯಾವು ಉತ್ತರ ಕೊರಿಯಾದ ಉದ್ಯೋಗ ನೀಡಿ ಜೀವನಾಧಾರ ಕಲ್ಪಿಸುತ್ತಿರುವ ದೇಶವಾಗಿದೆ. ಚೀನಾ ಮತ್ತು ರಷ್ಯಾ ಉತ್ತರ ಕೊರಿಯಾ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಬೇಕು. ಕ್ಷಿಪಣಿ ಪರೀಕ್ಷೆಗಳನ್ನು ನಡೆಸುತ್ತಿರವ ಉತ್ತರ ಕೊರಿಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಮೆರಿಕಾ ಸರ್ಕಾರದ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ.

[ಇದನ್ನೂ ಓದಿ:ಪರಮಾಣು ಕ್ಷಿಪಣಿ ಬರ್ತಿದೆ ಓಡಿ ಓಡಿ… ಬಚ್ಚಿಟ್ಟುಕೊಳ್ಳಿ.. ಬೆಳ್ಳಂಬೆಳಗ್ಗೆ ನಡುಗಿದ ಜಪಾನೀಯರು]

ಇಂತಹ ಪ್ರಚೋದಿಸುವ ಕೃತ್ಯಗಳಿಗೆ ಇಳಿಯುವ ಮೂಲಕ ಉತ್ತರ ಕೊರಿಯಾ ಆರ್ಥಿಕವಾಗಿ, ರಾಜತಾಂತ್ರಿಕವಾಗಿ ಮತ್ತಷ್ಟು ಏಕಾಂಗಿಯಾಗಿ ಉಳಿಯಲಿದೆಯೇ ಹೊರತು ಏನೂ ಪ್ರಯೋಜನವಿಲ್ಲ ಎಂದು ಟಿಲ್ಲರ್ ಹೇಳಿದ್ದಾರೆ.

Get Latest updates on WhatsApp. Send ‘Add Me’ to 8550851559