ಅಮೆರಿಕದ ಏಟಿಗೆ ತತ್ತರಿಸಿದ ಪಾಕ್: ಉಗ್ರರಿಗೆ ಆರ್ಥಿಕ ನೆರವು ನೀಡುವವರನ್ನು ಜೈಲಿಗೆ ಕಳಿಸಲು ಸಿದ್ಧವಂತೆ |News Mirchi

ಅಮೆರಿಕದ ಏಟಿಗೆ ತತ್ತರಿಸಿದ ಪಾಕ್: ಉಗ್ರರಿಗೆ ಆರ್ಥಿಕ ನೆರವು ನೀಡುವವರನ್ನು ಜೈಲಿಗೆ ಕಳಿಸಲು ಸಿದ್ಧವಂತೆ

ಅಮೆರಿಕ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಇದೀಗ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದ್ ಗೆ ಆರ್ಥಿಕ ನೆರವು ನೀಡುತ್ತಿರುವರಿಗೆ ಎಚ್ಚರಿಕೆ ನೀಡಿದೆ. ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಪಾಕಿಸ್ತಾನಕ್ಕೆ ಅಮರಿಕದಿಂದ ನೀಡುತ್ತಿರುವ ಎಲ್ಲಾ ರೀತಿಯ ಮಿಲಿಟರಿ ನೆರವುಗಳನ್ನು ಸ್ಥಗಿತಗೊಳಿಸಿರುವುದಾಗಿ ಅಮೆರಿಕಾ ಘೋಷಿಸಿತ್ತು. ಕಳೆದ 15 ವರ್ಷಗಳಿಂದ ಅಮೆರಿಕಾ ಮೂರ್ಖತನದಿಂದ ಪಾಕಿಸ್ತಾನಕ್ಕೆ 33 ಮಿಲಿಯನ್ ಡಾಲರ್ ನೆರವು ನೀಡಿದ್ದು, ಇದಕ್ಕೆ ಪ್ರತಿಯಾಗಿ ನಮಗೆ ಪಾಕ್ ನಮಗೆ ಬರಿ ಸುಳ್ಳು ಹೇಳಿ ವಂಚಿಸಿ, ಭಯೋತ್ಪಾದಕರಿಗೆ ಸ್ವರ್ಗಧಾಮವಾಗಿದೆ ಎಂದು ಆರೋಪಿಸಿದ್ದರು.

ಜಮಾತ್-ಉದ್-ದಾವಾ(ಜೆಯುಡಿ), ಲಷ್ಕರ್ ಇ ತೊಯ್ಬಾ , ಜೈಷ್-ಇ-ಮೊಹಮದ್ ಮುಂತಾದ ಸಂಘಟನೆಗಳು ಸೇರಿ 72 ಸಂಘಟನೆಗಳ ಪಟ್ಟಿಯನ್ನೊಳಗೊಂಡ ಜಾಹೀರಾತನ್ನು ಪಾಕಿಸ್ತಾನ ಪ್ರಕಟಿಸಿದೆ. ಈ ಪಟ್ಟಿಯಲ್ಲಿರುವ ಸಂಘಟನೆಗಳೆಲ್ಲಾ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲು ಅರ್ಹವಲ್ಲ ಎಂದು ಜಾಹೀರಾತಿನಲ್ಲಿ ಪಾಕ್ ಸರ್ಕಾರ ತಿಳಿಸಿದೆ.

ಈ ಸಂಘಟನೆಗಳಿಗೆ ಆರ್ಥಿಕ ನೆರವು ನೀಡುವವರಿಗೆ 5 ರಿಂದ 10 ವರ್ಷ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸುವುದಾಗಿ ಪಾಕ್ ಸರ್ಕಾರ ಎಚ್ಚರಿಸಿದೆ. ಜೆಯುಡಿ, ಎಫ್ಐಎಫ್ ಮತ್ತು 2008 ರಲ್ಲಿ ಮುಂಬೈ ದಾಳಿಯ ಪ್ರಮುಖ ಸೂತ್ರಧಾರ ಹಫೀಜ್ ಸಯೀದ್ ನ ಲಷ್ಕರ್ ಇ ತೊಯ್ಬಾ ಸಂಘಟನೆಗಳನ್ನು ಅಮೆರಿಕಾ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿ ಸೇರಿಸಿದ್ದು, ಹಫೀಜ್ ಸಯೀದ್ ಕುರಿತು ಮಾಹಿತಿ ನೀಡುವವರಿಗೆ ಬಹುಮಾನವನ್ನು ಘೋಷಿಸಿತ್ತು.

English Summary: After US President Donald Trump accused Islamabad of providing safe haven to terrorists, Pakistan today published an advertisement and warned people against donating to terror groups.

Get Latest updates on WhatsApp. Send ‘Subscribe’ to 8550851559

Loading...
loading...
error: Content is protected !!