ಅಗ್ನಿ-5 ಕ್ಷಿಪಣಿ ಪ್ರಯೋಗ ಯಶಸ್ವಿ – News Mirchi

ಅಗ್ನಿ-5 ಕ್ಷಿಪಣಿ ಪ್ರಯೋಗ ಯಶಸ್ವಿ

ನವದೆಹಲಿ: ಒಡಿಶಾ ತೀರದ ಅಬ್ದುಲ್ ಕಲಾಂ ದ್ವೀಪದಿಂದ ಅಗ್ನಿ-5 ಖಂಡಾಂತರ ಕ್ಷಿಪಣಿಯ ಪ್ರಯೋಗ ಇಂದು ಯಶಸ್ವಿಯಾಗಿ ನಡೆಯಿತು. ಡಿಆರ್‌ಡಿಒ ವಿಜ್ಞಾನಿಗಳು ಇದನ್ನು ನಿರ್ಮಿಸಿದ್ದರು. ಸದ್ಯ ಈ ಕ್ಷಿಪಣಿಯ ನ್ಯಾವಿಗೇಷನ್, ಗೈಡೆಡ್ ವ್ಯವಸ್ಥೆಗಳನ್ನು ಪರೀಕ್ಷಿಸಿದರು. ಮತ್ತಷ್ಟು ಪ್ರಯೋಗಗಳ ನಂತರ ಇದು ಸೇನೆಯ ಬತ್ತಳಿಕೆಗೆ ಸೇರಲಿದೆ.

ಅಗ್ನಿಯ ವಿಶೇಷತೆಗಳು

  • ಭಾರತ 35 ದೇಶಗಳ ಮಿಸ್ಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ ನಲ್ಲಿ ಸದಸ್ಯತ್ವ ಪಡೆದ ನಂತರ ಅಗ್ನಿ-5 ನಡೆಸುತ್ತಿರುವ ಮೊದಲ ಪ್ರಯೋಗ ಇದಾಗಿದೆ.
  • ಒಂದು ಟನ್ ತೂಕದ ಸಿಡಿತಲೆಯನ್ನು ಅಗ್ನಿ-5 ಸುಮಾರು 5000 ಕಿ.ಮೀ ದೂರ ಹೊತ್ತೊಯ್ಯಬಲ್ಲದು. ಏಷ್ಯಾದ ಹಲವು ದೇಶಗಳು ಈ ಕ್ಷಿಪಣಿಯ ವ್ಯಾಪ್ತಿಗೆ ಬರುತ್ತವೆ. ಮುಖ್ಯವಾಗಿ ಚೀನಾ, ಯೂರೋಪ್, ಪಾಕಿಸ್ಥಾನದ ಪ್ರದೇಶಗಳು ಈ ಕ್ಷಿಪಣಿ ವ್ಯಾಪ್ತಿಯಲ್ಲಿರುತ್ತವೆ.
  • ಘನ ಇಂಧನ ವ್ಯವಸ್ಥೆಯಿಂದ ಕಾರ್ಯನಿರ್ವಹಿಸುವ ಇದು ಪ್ರೊಪೆಲ್ಲೆಂಟ್ ಸಹಾಯದಿಂದ ಕೆಲಸ ಮಾಡುತ್ತದೆ. ಇದರಿಂದ ಯಾವುದೇ ವಾತಾವರಣದಲ್ಲಿಯೂ ಮೊಬೈಲ್ ಲಾಂಚ್ ವೆಹಿಕಲ್ ಮೂಲಕ ಇದನ್ನು ಪ್ರಯೋಗಿಸಬಹುದು.
  • ಸುಮಾರು 17 ಮೀಟರ್ ಉದ್ದ, 50 ಟನ್ ತೂಕವಿರುವ ಈ ಕ್ಷಿಪಣಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
  • ಅತ್ಯಾಧುನಿಕ ಫೈರ್ ಅಂಡ್ ಫರ್ಗೆಟ್ ತಂತ್ರಜ್ಞಾನದ ಕಾರಣ ಶತೃಗಳು ಇದನ್ನು ಪತ್ತೆ ಹಚ್ಚಲು ತುಂಬಾ ಕಷ್ಟ.
  • ಭಾರತದ ಬತ್ತಳಿಕೆಯಲ್ಲಿ ಈಗಾಗಲೇ ಈ ಸರಣಿಯ ಅಹ್ನಿ 1, 2, 3, 4 ಕ್ಷಿಪಣಿಗಳಿವೆ.
  • ಅಗ್ನಿ-5 ನ್ನು ಭಾರತ ಶಾಂತಿ ಅಸ್ತ್ರದೊಂದಿಗೆ ಹೋಲಿಸಿದ್ದು ಈ ಪರೀಕ್ಷೆಗೆ ಪ್ರಾಮುಖ್ಯತೆ ಹೆಚ್ಚಿತ್ತು.

ಅಗ್ನಿ-5 ರ ನಂತರದ ವರ್ಷನ್ ಆದ ಅಗ್ನಿ-6 ಯೋಜನೆ ಕೂಡಾ ಪ್ರಾಥಮಿಕ ಹಂತದಲ್ಲಿದೆ. ಸುಮಾರು 8,000 ದಿಂದ 10,000 ಕಿ.ಮೀ ವ್ಯಾಪ್ತಿಯನ್ನು ಹೊಂದಿರಲಿರುವ ಈ ಕ್ಷಿಪಣಿಯನ್ನು ಸಬ್ ಮರೀನ್ ಗಳಿಂದಲೂ ಪ್ರಯೋಗಿಸಲು ಸಾಧ್ಯವಾಗುವಂತೆ ನಿರ್ಮಿಸಲಾಗುತ್ತಿದೆ.

Loading...

Leave a Reply

Your email address will not be published.