ಅಗ್ನಿ ಶ್ರೀಧರ್ ಗೆ ಮತ್ತೆ ಸಂಕಷ್ಟ, ಕೊತ್ವಾಲ್ ರಾಮಚಂದ್ರ ಹತ್ಯೆ ಕೇಸ್‌ಗೆ ಮರುಜೀವ? – News Mirchi

ಅಗ್ನಿ ಶ್ರೀಧರ್ ಗೆ ಮತ್ತೆ ಸಂಕಷ್ಟ, ಕೊತ್ವಾಲ್ ರಾಮಚಂದ್ರ ಹತ್ಯೆ ಕೇಸ್‌ಗೆ ಮರುಜೀವ?

ಬೆಂಗಳೂರು: ಮಾಜಿ ರೌಡಿ, ಅಗ್ನಿ ಪತ್ರಿಕೆ ಸಂಪಾದಕ ಅಗ್ನಿ ಶ್ರೀಧರ್ ಗೆ ಮತ್ತೆ ಸಂಕಷ್ಟ ಸಮಯ ಶುರುವಾಗಿದೆ. ಭೂಗತ ಪಾತಕಿ ಕೊತ್ವಾಲ್ ರಾಮಚಂದ್ರ ಹತ್ಯೆ ಪ್ರಕರಣವನ್ನು ಮತ್ತೆ ಪರಿಶೀಲನೆ ನಡೆಸುವುದಾಗಿ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ. ಕೊತ್ವಾಲ್ ರಾಮಚಂದ್ರ ಹತ್ಯೆಯಲ್ಲಿ ಭಾಗಿಯಾಗಿದ್ದಾಗಿ ಸ್ವತಃ ಅಗ್ನಿ ಶ್ರೀಧರ್ ರಾಜ್ಯ ಪೊಲೀಸ್ ನಿರ್ದೇಶಕ ಅರ್.ಕೆ.ದತ್ತ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನ ಪತ್ರವನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.

ಕೊತ್ವಾಲ್ ರಾಮಚಂದ್ರ

ರೌಡಿಯಿಸಂ ಎಲ್ಲಾ ಬಿಟ್ಟು ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ಅಗ್ನಿ ಶ್ರೀಧರ್, ಅಗ್ನಿ ಪತ್ರಿಕೆ ಸಂಪಾದಕರೂ ಆಗಿದ್ದಾರೆ. ಅದರೆ ಇತ್ತೀಚೆಗೆ ನಡೆದ ಕಡಬಗೆರೆ ಶ್ರೀನಿವಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ಅಗ್ನಿ ಶ್ರೀಧರ್ ಸ್ಥಾಪಿಸಿದ್ದ ಕರುನಾಡ ಸೇನೆಯಲ್ಲಿ ಗುರುತಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿಯೇ ಆರೋಪಿಗಳಿಗೆ ಆಶ್ರಯ ನೀಡಿದ್ದಾರೆಂಬ ಅನುಮಾನದ ಮೇಲೆ ಶ್ರೀಧರ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಅಕ್ರಮ ಶಸ್ತ್ರಾಸ್ತ್ರಗಳು, ವಿದೇಶೀ ಮದ್ಯ ದೊರಕಿತ್ತು.

Loading...

Leave a Reply

Your email address will not be published.