ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜಿಸಿ ಸಿಕ್ಕಿಬಿದ್ದ ಸಚಿವ |News Mirchi

ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜಿಸಿ ಸಿಕ್ಕಿಬಿದ್ದ ಸಚಿವ

ಸ್ವಚ್ಛ ಭಾರತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳುತ್ತಿದ್ದರೆ, ಸ್ವಂತ ಪಕ್ಷ ಬಿಜೆಪಿಯವರೇ ಅವರಿಗೆ ಮುಜುಗರ ತರುತ್ತಿದ್ದಾರೆ. ಅವರ ಸಚಿವ ಸಂಪುಟದ ಸದಸ್ಯರು, ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ್ ಬಹಿರಂಗ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಸುದ್ದಿಯಾಗಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಕಾರು ನಿಲ್ಲಿಸಿ ಭದ್ರತಾ ಸಿಬ್ಬಂದಿಯ ರಕ್ಷಣೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾ ನಿಂತಿರುವುದು ಫೋಟೋಗಳಲ್ಲಿವೆ.

  • No items.

ಇತ್ತೀಚೆಗಷ್ಟೇ ಬಿಜೆಪಿ ಸಂಸದ ಪ್ರಿಯಾಂಕಾ ರಾವತ್ ಸರಯೂ ನದಿಯಲ್ಲಿ ಪ್ಲಾಸ್ಟಿಕ್ ಬಾಟಲ್ ಎಸೆದ ವೀಡಿಯೋ ಬಹಿರಂಗವಾಗಿ ವಿವಾದವಾಗಿತ್ತು. ಒಂದು ಕಡೆ ಸ್ವಚ್ಛ ಭಾರತ ಕಾರ್ಯಕ್ರಮದಿಂದ ಜನರಲ್ಲಿ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದರೆ, ಸ್ವತಃ ಸಚಿವರು, ಸಂಸದರೇ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Loading...
loading...
error: Content is protected !!