ಮುಂದಿನ ಗುರಿ ಗುಜರಾತ್ ವಿಧಾನಸಭೆ ಚುನಾವಣೆ: ಅಹಮದ್ ಪಟೇಲ್ |News Mirchi

ಮುಂದಿನ ಗುರಿ ಗುಜರಾತ್ ವಿಧಾನಸಭೆ ಚುನಾವಣೆ: ಅಹಮದ್ ಪಟೇಲ್

ಅಹಮದಾಬಾದ್: ರಾಜ್ಯಸಭೆಗೆ ಐದನೇ ಬಾರಿಗೆ ಆಯ್ಕೆಯಾದ ಕಾಂಗ್ರೆಸ್ ಹಿರಿಯ ನಾಯಕ ಅಹಮದ್ ಪಟೇಲ್ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಗೆಲ್ಲಿಸಿದ ಶಾಸಕರಿಗೆ ಅವರು ಟ್ವಿಟರ್ ಮೂಲಕ ಧನ್ಯವಾದಗಳನ್ನು ಹೇಳಿದ್ದಾರೆ. ತಮ್ಮನ್ನು ಸೋಲಿಸಲು ಅಪಾರ ಹಣ ವೆಚ್ಚ ಮಾಡಿದ್ದಲ್ಲದೆ, ಅಧಿಕಾರವನ್ನೂ ಬಳಸಿದರು ಎಂದು ಬಿಜೆಪಿ ವಿರುದ್ಧ ಪಟೇಲ್ ಆರೋಪಿಸಿದರು. ಮುಂದಿನ ಗುರಿ ಗುಜರಾತ್ ವಿಧಾನಸಭೆ ಚುನಾವಣೆ ಎಂದು ಹೇಳಿರುವ ಅವರು, ಈ ಗೆಲುವು ತಮ್ಮ ಗೆಲುವಲ್ಲ, ರಾಜ್ಯದಲ್ಲಿ ನಡೆದ ಅಧಿಕಾರ ದುರ್ಬಳಕೆ, ಹಣ ಹಂಚಿಕೆಗೆ ಸೋಲಾಗಿದೆ ಎಂದು ಅವರು ಬಣ್ಣಿಸಿದರು.

ಫಲಿಸದ ಬಿಜೆಪಿ ತಂತ್ರ : ಅಹಮದ್ ಪಟೇಲ್ ಗೆಲುವು

ಗುಜರಾತ್ ನಲ್ಲಿ ಮೂರು ರಾಜ್ಯಸಭೆ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಮೂವರು ಬಿಜೆಪಿ ಅಭ್ಯರ್ಥಿಗಳು, ಒಬ್ಬರು ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿದ್ದರು. ಬಿಜೆಪಿಯಿಂದ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಗೆದ್ದರೆ, ಬಲ್ವಂತ್ ಸಿಂಗ್ ರಜಪೂರ್ ಮಾತ್ರ ಸೋಲನುಭವಿಸಿದರು. ಬಿಜೆಪಿ ನಾಯಕರಿಗೆ ತೋರಿಸಿ ಮತ ಹಾಕಿದ ಕಾಂಗ್ರೆಸ್ ನ ಇಬ್ಬರು ಶಾಸಕರ ಮತಗಳು ಅನರ್ಹಗೊಂಡಿದ್ದರಿಂದ ಅಹ್ಮದ್ ಪಟೇಲ್ ತಮ್ಮ ಗೆಲುವಿಗೆ ಬೇಕಾದ ಮ್ಯಾಜಿಕ್ ಸಂಖ್ಯೆ 44 ಮತಗಳನ್ನು ಪಡೆಯಲು ಸಾಧ್ಯವಾಯಿತು.

Loading...
loading...
error: Content is protected !!