ಕೊಹ್ಲಿಯೊಂದಿಗೆ ಹೋಲಿಕೆ: ಪಾಕ್ ಅಭಿಮಾನಿಗಳಿಂದಲೇ ತರಾಟೆ |News Mirchi

ಕೊಹ್ಲಿಯೊಂದಿಗೆ ಹೋಲಿಕೆ: ಪಾಕ್ ಅಭಿಮಾನಿಗಳಿಂದಲೇ ತರಾಟೆ

ಪಾಕ್ ಕ್ರಿಕೆಟಿಗನೊಬ್ಬ ತನ್ನನ್ನು ತಾನು ಭಾರತದ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿಯೊಂದಿಗೆ ಹೋಲಿಸಿಕೊಂಡು ತನ್ನದೇ ದೇಶದ ಕ್ರಿಕೆಟ್ ಪ್ರಿಯರ ಎದುರು ನಗೆಪಾಟಲಿಗೀಡಾಗಿದ್ದಾನೆ.

ಪಾಕ್ ಕ್ರಿಕೆಟರ್ ಅಹಮದ್ ಶೆಹಜಾದ್, ತಾನು ವಿರಾಟ್ ಕೊಹ್ಲಿಯಂತೆ ಕಾಣುತ್ತೇನೆ, ನಮ್ಮಿಬ್ಬರ ನಡುವೆ ಹಲವು ಹೋಲಿಕೆಗಳಿವೆ ಎಂದು ಸದಾ ಹೇಳುತ್ತಿರುತ್ತಾನೆ. ಇತ್ತೀಚೆಗೆ ಶೆಹಜಾದ್ ತನ್ನನ್ನು ಕೊಹ್ಲಿಯೊಂದಿಗೆ ಹೋಲಿಕೆ ಮಾಡಿಕೊಂಡಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಕ್ರಿಕೆಟ್ ಪ್ರಿಯರು ಸರಿಯಾಗಿ ಜಾಡಿಸಿದ್ದಾರೆ.

  • No items.

ವಿರಾಟ್ ಕೊಹ್ಲಿ, ಜೋ ರೂಟ್, ಕೇನ್ ವಿಲಿಯಮ್ಸ್ ಇವರಿಗೆಲ್ಲಾ ತಂಡದ ಸದಸ್ಯರು, ಅಭಿಮಾನಿಗಳಿಂದ ತುಂಬಾ ಬೆಂಬಲ ಸಿಗುತ್ತದೆ, ಆದರೆ ಈ ವಿಷಯದಲ್ಲಿ ತಾನು ದುರದೃಷ್ಟವಂತನೆಂದು ಶೆಹಜಾದ್ ಹೇಳಿದ್ದನೆಂದು ಪಾಕ್ ನ ಪತ್ರಕರ್ತರೊಬ್ಬರು ಇತ್ತೀಚೆಗೆ ಟ್ವೀಟ್ ಮಾಡಿದ್ದರು.

ಇದನ್ನು ನೋಡುತ್ತಿದ್ದಂತೆ ಕ್ರಿಕೆಟ್ ಪ್ರಿಯರು ಶೆಹಜಾದ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊಹ್ಲಿ, ರೂಟ್, ವಿಲಿಯಮ್ಸ್ ರವರೊಂದಿಗೆ ಶೆಹಜಾದ್ ಹೋಲಿಕೆ ಮಾಡಿಕೊಳ್ಳುವುದು ನಾಚಿಕೆಗೇಡಿನ ವಿಷಯ. ಅವರೊಂದಿಗೆ ಹೋಲಿಕೆ ಮಾಡಿಕೊಳ್ಳುವ ಅರ್ಹತೆ ಶೆಹಜಾದ್ ಗಿಲ್ಲ ಎಂದು ಅಭಿಮಾನಿಯೊಬ್ಬ ಖಾರವಾಗಿ ಪ್ರತಿಕ್ರಿಯಿಸಿದ್ದಾನೆ.

ಶೆಹಜಾದಾ ಮಾತುಗಳಿಗೆ ಪಾಕ್ ಕ್ರಿಕೆಟ್ ಅಭಿಮಾನಿಗಳು ಆತನ ಕಾಲೆಳೆಯುತ್ತಿದ್ದಾರೆ. ಕೊಹ್ಲಿ ಎಲ್ಲಾ ಫಾರ್ಮಾಟ್ ಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ರನ್ ಹೊಳೆ ಹರಿಸುತ್ತಿದ್ದರೆ, ಶೆಹಜಾದ್ ಮಾತ್ರ ತಂಡದಲ್ಲಿ ಸ್ಥಾನ ಸಿಗದೆ ಒದ್ದಾಡುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ..

Loading...
loading...
error: Content is protected !!