ಹಾಡುಹಗಲೇ ವ್ಯಾಪಾರಿಯ ಕಿಡ್ನ್ಯಾಪ್: ಸಿಸಿಟಿವಿಯಲ್ಲಿ ಸೆರೆಯಾಯ್ತು ವೀಡಿಯೋ – News Mirchi

ಹಾಡುಹಗಲೇ ವ್ಯಾಪಾರಿಯ ಕಿಡ್ನ್ಯಾಪ್: ಸಿಸಿಟಿವಿಯಲ್ಲಿ ಸೆರೆಯಾಯ್ತು ವೀಡಿಯೋ

ಹಾಡುಹಗಲೇ ಎಲ್ಲರೂ ನೋಡುತ್ತಿರುವಂತೆಯೇ ಕಿಡ್ನಾಪ್ ನಡೆಯುತ್ತಿದ್ದರೂ ಬಿಡಿಸಲು ಸಾಧ್ಯವಾಗದಿದ್ದರೂ, ಪ್ರಶ್ನಿಸಲೂ ಹಿಂದೇಟು ಹಾಕಿದ ಅಲ್ಲಿದ್ದ ಜನ ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದ ಘಟನೆ ನಡೆದಿದೆ.

ಗುಜರಾತ್ ನ ಅಹಮದಾಬಾದ್ ನ ಸಣ್ಣ ವ್ಯಾಪಾರಿಯೊಬ್ಬರು ರಾಜಸ್ಥಾನದ ಉದಯಪುರಕ್ಕೆ ವ್ಯಾಪಾರದ ಕೆಲಸ ಮೇಲೆ ಹೋಗಿದ್ದರು. ಅಲ್ಲಿ ಬೆಳಗ್ಗೆ ಅಂಗಡಿಯೊಂದರ ಮುಂದೆ ಬಂದ ಆ ವ್ಯಾಪಾರಿಯನ್ನು ಕಾರಿನಲ್ಲಿ ಬಂದ ನಾಲ್ವರು ವ್ಯಕ್ತಿಗಳು ಬಲವಂತವಾಗಿ ಕಾರಿನೊಳಗೆ ನೂಕಿ ಅಪಹರಿಸಿಕೊಂಡು ಹೋದರು. ಇದೆಲ್ಲಾ ನಡೆಯುತ್ತಿರುವಾಗ ಅಲ್ಲಿ ಕೆಲ ಜನ ನಿಂತಿದ್ದರೂ ಕಾಪಾಡುವುದಿರಲಿ, ಕನಿಷ್ಟ ಪ್ರಶ್ನಿಸಲೂ ಮುಂದಾಗಲಿಲ್ಲ. ಹೀಗಾಗಿ ಮತ್ತಷ್ಟು ಧೈರ್ಯದಿಂದ ಆತನನ್ನು ಕಾರಿನೊಳಗೆ ತಳ್ಳಿ ಕಿಡ್ನ್ಯಾಪ್ ಮಾಡಿದರು.

ಅಂಗಡಿ ಮುಂದೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇದೆಲ್ಲಾ ಸೆರೆಯಾಗಿದ್ದು, ಆ ಅಂಗಡಿ ಮಾಲೀಕರು ಇದನ್ನು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಈ ವೀಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಉದಯಪುರ ಸ್ಥಳೀಯ ಚಾನೆಲ್ ಗಳು ಪ್ರಸಾರ ಮಾಡಿದ್ದರಿಂದ ಎಚ್ಚೆತ್ತುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೆಳಗಿನ ವೀಡಿಯೋ ನೋಡಿ.

Loading...