ಅಣ್ಣಾಡಿಎಂಕೆ ಪಕ್ಷದ ಮಹತ್ವದ ತೀರ್ಮಾನ, ಕೊನೆಗೂ ಶಶಿಕಲಾ ಔಟ್ – News Mirchi

ಅಣ್ಣಾಡಿಎಂಕೆ ಪಕ್ಷದ ಮಹತ್ವದ ತೀರ್ಮಾನ, ಕೊನೆಗೂ ಶಶಿಕಲಾ ಔಟ್

ತಮಿಳುನಾಡು ರಾಜಕೀಯ ಬೆಳವಣಿಗೆಗಳು ಮತ್ತೆ ಕುತೂಹಲ ಮೂಡಿಸಿವೆ. ಅಣ್ಣಾಡಿಎಂಕೆ ಪಕ್ಷದಿಂದ ಹೇಳಿದಂತೆಯೇ ತಮಿಳುನಾಡು ಮುಖ್ಯಮಂತ್ರಿ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಳಾರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಉಚ್ಚಾಟಿಸಲಾಗಿದೆ. ಆಕೆಯನ್ನು ಎಲ್ಲಾ ರೀತಿಯ ಹುದ್ದೆಗಳಿಂದ ಉಚ್ಛಾಟಿಸುತ್ತಿರುವುದಾಗಿ ಪಕ್ಷ ಸ್ಪಷ್ಟಪಡಿಸಿದೆ.

ಹಾಗೆಯೇ ಶಶಿಕಲಾ ಸಂಬಂಧಿ ಟಿವಿವಿ ದಿನಕರನ್ ನನ್ನು ಕೂಡಾ ಪಕ್ಷ ಮತ್ತು ಇತರೆ ಹುದ್ದೆಗಳಿಂದ ಉಚ್ಛಾಟಿಸಿದೆ. ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ, ಅವರು ಮಾಡಿದ ನೇಮಕಗಳನ್ನೂ ರದ್ದು ಮಾಡುತ್ತಿರುವುದಾಗಿ ಪಕ್ಷ ಪ್ರಕಟಿಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆ ಎಂದಿಗೂ ತಮ್ಮ ಪ್ರೀತಿಯ ನಾಯಕಿ ದಿವಂಗತ ಜಯಲಲಿತಾ ಹೆಸರಿನಲ್ಲಿಯೇ ಇರಲಿದೆ, ಪಕ್ಷ ಚಿಹ್ನೆಯಾದ ಎರಡು ಎಲೆಗಳು ಕೂಡಾ ಪಕ್ಷಕ್ಕೇ ಸಿಗುತ್ತದೆ ಎಂದು ಪಕ್ಷದ ಪ್ರಕಟಣೆ ಹೇಳಿದೆ. ಜಯಲಲಿತಾ ಅಂದು ಮಾಡಿದ ನೇಮಕಾತಿಗಳೇ ಪುನಃ ಮುಂದುವರೆಯುತ್ತವೆ ಎಂದು ಸ್ಪಷ್ಟಪಡಿಸಿದೆ.

ಅಣ್ಣಾಡಿಎಂಕೆ ಪಕ್ಷದ ಜನರಲ್ ಕೌನ್ಸಿಲ್ ಸಭೆ ಮಂಗಳವಾರ ನಡೆಯಿತು. ಇದರಲ್ಲಿ ಪಕ್ಷದ ತೀರ್ಮಾನಗಳನ್ನು ಆರ್.ಬಿ.ಉದಯ್ ಕುಮಾರ್ ಓದಿದರು. ಆದರೆ ಪಕ್ಷದ ಕೌನ್ಸಿಲ್ ತೆಗೆದುಕೊಂಡ ಈ ತೀರ್ಮಾನವನ್ನು ದಿನಕರನ್ ಅಲ್ಲಗೆಳೆದಿದ್ದಾರೆ. ತಮ್ಮನ್ನಾಗಲೀ, ತಮ್ಮ ಚಿಕ್ಕಮ್ಮ ಶಶಿಕಲಾ ಅವರನ್ನಾಗಲೀ ಉಚ್ಛಾಟಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ಅವರು ಹೇಳಿದ್ದಾರೆ. ಸದ್ಯ ಎಐಎಡಿಎಂಕೆ 11 ಸದಸ್ಯರ ಪ್ಯಾನೆಲ್ ಸದಸ್ಯರೊಂದಿಗೆ ಮುಂದುವರೆಯುತ್ತಿದ್ದು, ಇದಕ್ಕೆ ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ನೇತೃತ್ವ ವಹಿಸಿದ್ದಾರೆ.

Get Latest updates on WhatsApp. Send ‘Add Me’ to 8550851559

Loading...