ವಾಯುಸೇನೆಯ ವಿಮಾನಗಳಲ್ಲಿ ಹಣ ಸಾಗಾಟ

ಗರಿಷ್ಠ ಮುಖಬೆಲೆಯ ನೋಟು ರದ್ದು ಮಾಡಿದ್ದರಿಂದ ಜನಸಾಮಾನ್ಯರು ಪ್ರತಿದಿನ ಎಟಿಎಂ,ಬ್ಯಾಂಕುಗಳ ಸುತ್ತ ಅಲೆಯುತ್ತಿರುವುದು ಮತ್ತು ಬೇಡಿಕೆಗೆ ತಕ್ಕಂತೆ ನಗದು ಇಲ್ಲ ಎಂದು ಬ್ಯಾಂಕುಗಳು ಅಸಹಾಯಕತೆ ವ್ಯಕ್ತಪಡಿಸುತ್ತಿರುವುದು ಮುಂತಾದ ಪರಿಣಾಮಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತಿದೆ.

ಹಣದ ಕೊರತೆ ನೀಗಿಸಲು ಕೂಡಲೇ ಹಣವನ್ನು ವಿತರಣಾ ಕೇಂದ್ರಗಳಿಗೆ ಸರಬರಾಜು ಮಾಡಲು ಹೆಲಿಕಾಪ್ಟರ್ ಗಳು, ಭಾರತೀಯ ವಾಯುಸೇನೆಯ ವಿಮಾನಗಳನ್ನು ಬಳಸಿಕೊಳ್ಳಲು ತೀರ್ಮಾನಿಸಿದೆ.

ಈಗ ನೋಟು ಮುದ್ರಣಾಲಯಗಳಿಂದ ಮುಖ್ಯ ವಿತರಣಾ ಕೇಂದ್ರಗಳಿಗೆ ಹೊಸ ನೋಟು ಸಾಗಿಸಲು 21 ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಈ ಸಮಯವನ್ನು ಆರು ದಿನಗಳಿಗೆ ಇಳಿಸುವ ಉದ್ದೇಶದಿಂದ ಎಲ್ಲಾ ರೀರಿಯ ಸಾರಿಗೆ ವ್ಯವಸ್ಥೆಗಳನ್ನು ಉಪಯೋಗಿಸಿಕೊಳ್ಳಲು ಕೇಂದ್ರ ತೀರ್ಮಾನಿಸಿದೆ. ಈಗಾಗಲೇ ಹೆಲಿಕಾಪ್ಟರ್ ಹಾಗೂ ವಾಯುಸೇನೆಯ ವಿಮಾನಗಳನ್ನು ಬಳಸಿಕೊಳ್ಳಲು ಆರಂಭಿಸಿದೆ. ಇನ್ನೊಂದು ವಾರದಲ್ಲಿ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬರುತ್ತದೆ ಎಂಬ ವಿಶ್ವಾಸ ಕೇಂದ್ರ ಸರ್ಕಾರದ್ದು. ನಗರ ಪ್ರದೇಶಗಳಲ್ಲಿ ಪರಿಸ್ಥಿತಿ ತುಸು ಸುಧಾರಿಸಿದ್ದು, ಈಗ ಸರ್ಕಾರ ಗ್ರಾಮೀಣ ಪ್ರದೇಶಗಳತ್ತ ದೃಷ್ಟಿ ಹಾಯಿಸಿದೆ.

Related News

Comments (wait until it loads)
Loading...
class="clear">

News Mirchi is Stephen Fry proof thanks to caching by WP Super Cache