ಶಿವಸೇನಾ ಸಂಸದನಿಗೆ ಏರ್ ಇಂಡಿಯಾ ಮತ್ತೊಂದು ಶಾಕ್! |News Mirchi

ಶಿವಸೇನಾ ಸಂಸದನಿಗೆ ಏರ್ ಇಂಡಿಯಾ ಮತ್ತೊಂದು ಶಾಕ್!

ನವದೆಹಲಿ: ತಮ್ಮ ವಿಮಾನದಲ್ಲಿ 60 ವರ್ಷದ ಸಿಬ್ಬಂದಿಯ ಮೇಲೆ ದುರ್ವರ್ತನೆ ತೋರಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಗೆ ಸರ್ಕಾರಿ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಮತ್ತೊಮ್ಮೆ ಶಾಕ್ ನೀಡಿದೆ. ಸಂಸದ ರವೀಂದ್ರ ಗಾಯಕ್ವಾಡ್ ಮುಂಬೈನಿಂದ ದೆಹಲಿಗೆ ಹೋಗಲು ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿದ್ದರು. ಆದರೆ ಕೂಡಲೇ ಆ ಟಿಕೆಟ್ ಅನ್ನು ಸಂಸ್ಥೆ ರದ್ದು ಮಾಡಿದೆ.

ಕಳೆದ ಗುರುವಾರ ಪುಣೆ-ನವದೆಹಲಿ ವಿಮಾನದಲ್ಲಿ ಬ್ಯುಸಿನೆಸ್ ಕ್ಲಾಸ್ ನಿರಾಕರಿಸಿದ್ದರಿಂದ ಆಕ್ರೋಶಗೊಂಡಿದ್ದ ಗಾಯಕ್ವಾಡ್, ಏರ್ ಇಂಡಿಯಾ ಮ್ಯಾನೇಜರ್ ಆರ್.ಸುಕುಮಾರ್ ಮೇಲೆ ಹಲ್ಲೆ ನಡೆಸಿ, ಚಪ್ಪಲಿಯಿಂದ 25 ಬಾರಿ ಹೊಡೆದಿದ್ದರು. ಚಪ್ಪಲಿಯಲ್ಲಿ ಹೊಡೆದಿದ್ದಾಗಿ ಸ್ವತಃ ಗಾಯಕ್ವಾಡ್ ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಸಂಸದನ ದುರ್ವರ್ತನೆಗೆ ಪ್ರತಿಯಾಗಿ ಏರ್ ಇಂಡಿಯಾ ಮತ್ತು ಐದು ಖಾಸಗಿ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ಪ್ರಯಾಣಿಸದಂತೆ ಸಂಸದನಿಗೆ ನಿಷೇಧ ವಿಧಿಸಿದ್ದವು. ಈಗ ಮತ್ತೊಮ್ಮೆ ಮುಂಬೈನಿಂದ ನವದೆಹಲಿಗೆ ಟಿಕೆಟ್ ಖರೀದಿಸಿದ ಗಾಯಕ್ವಾಡ್ ಅವರ ಟಿಕೆಟ್ ಅನ್ನು ಏರ್ ಇಂಡಿಯಾ ಕೂಡಲೇ ರದ್ದುಗೊಳಿಸಿದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಆ ಸಂಸದ ಟಿಕೆಟ್ ಗೆ ಪ್ರಯತ್ನಿಸಿದರೂ ಸೀಟ್ ಹಂಚಿಕೆ ಮಾಡಬೇಡಿ ಎಂದು ಎಲ್ಲಾ ಕಾಲ್ ಸೆಂಟರ್‌ಗಳಿಗೂ ಆದೇಶ ಜಾರಿ ಮಾಡಿದೆ.

Loading...
loading...
error: Content is protected !!