ಜಿಯೋದಂತೆಯೇ ಏರ್ಟೆಲ್ 2 ಹೊಸ ಆಫರ್’ಗಳು – News Mirchi

ಜಿಯೋದಂತೆಯೇ ಏರ್ಟೆಲ್ 2 ಹೊಸ ಆಫರ್’ಗಳು

ಟೆಲಿಕಾಂಗ ದಿಗ್ಗಜ ಭಾರ್ತಿ ಏರ್ಟೆಲ್ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸದೊಂದು ಕೊಡುಗೆಯನ್ನು ಘೋಷಿಸಿದೆ. ಈ ಕೊಡುಗೆ ರಿಲಯನ್ಸ್ ಜಿಯೋನ ರೂ.399 ಪ್ಲಾನ್ ನಂತೆಯೇ ಇದೆ. ರೂ.399 ರ ಪ್ಲಾನ್ ರೀಚಾರ್ಜ್ ಮಾಡಿಕೊಂಡಲ್ಲಿ ಏರ್ ಟೆಲ್ ಗ್ರಾಹಕರು ಪ್ರತಿ ದಿನ 1 ಜಿಬಿ ಡಾಟಾ ದಂತೆ 84 ದಿನಗಳ ಕಾಲ ಇದರ ಪ್ರಯೋಜನವನ್ನು ಪಡೆಯಬಹುದು. ಏರ್ಟೆಲ್ ವೆಬ್ಸೈಟ್ ಪ್ರಕಾರ ಈ ಕೊಡುಗೆ ಕೇವಲ 4ಜಿ ಸಿಮ್ ಬಳಸುತ್ತಿರುವವರಿಗೆ ಅನ್ವಯವಾಗುತ್ತವೆ. ಡಾಟಾ ಜೊತೆಗೆ ಯಾವುದೇ ನೆಟ್ವರ್ಕ್ ಗೆ ಉಚಿತ ಅನಿಯಮಿತ ಕರೆ ಮಾಡಬಹುದು.

ಅಷ್ಟೇ ಅಲ್ಲದೆ ಮತ್ತೊಂದು ಪ್ಲಾನ್ ಕೂಡಾ ಇದೆ. ರೂ.244 ರೀಚಾರ್ಜ್ ಮಾಡಿಕೊಂಡರೆ 70 ದಿನಗಳ ಕಾಲ ಪ್ರತಿದಿನ 1 ಜಿಬಿ ಡಾಟಾ ನೀಡುವುದಾಗಿ ಹೇಳಿದೆ. ಈ ಕೊಡುಗೆಯಡಿ ಕೇವಲ ಏರ್ಟೆಲ್ ನಿಂದ ಏರ್ಟೆಲ್ ಗ್ರಾಹಕರಿಗೆ ಮಾತ್ರ ಉಚಿತ ಕರೆ ಮಾಡಿಕೊಳ್ಳಬಹುದಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸುತ್ತಿರುವ ರಿಲಯನ್ಸ್ ಜಿಯೋ ಎದುರು ನಿಲ್ಲಲು ಇತರೆ ಟೆಲಿಕಾಂ ಕಂಪನಿಗಳು ವಿಶೇಷ ಆಫರ್ ಘೋಷಿಸುತ್ತಿವೆ.

ಈಗಾಗಲೇ ಬಿಎಸ್ಎನ್ಎಲ್, ವೊಡಾಫೋನ್, ಐಡಿಯಾ, ಏರ್ ಸೆಲ್ ಮುಂತಾದ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಹೊಸ ಹೊಸ ಆಫರ್ ಗಳನ್ನು ಪ್ರಕಟಿಸುತ್ತಿವೆ. ಇವುಗಳಲ್ಲಿ ಏರ್ಟೆಲ್ ಮತ್ತು ಐಡಿಯಾ ಜಿಯೋ ಗೆ ಪ್ರಬಲ ಸ್ಪರ್ಧೆ ನೀಡಲು ಪ್ರಯತ್ನಿಸುತ್ತಿವೆ. ಇದುವರೆಗೂ 4ಜಿ ಗ್ರಾಹಕರನ್ನು ಮಾತ್ರ ಟಾರ್ಗೆಟ್ ಮಾಡಿದ್ದ ರಿಲಯನ್ಸ್, ಇದೀಗ 2ಜಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಕಡಿಮೆ ಬೆಲೆಯಲ್ಲಿ 4ಜಿ ಸಪೋರ್ಟ್ ಮಾಡಬಲ್ಲ ಜಿಯೋ ಫೀಚರ್ ಫೋನ್ ಬಿಡುಗಡೆ ಮಾಡುತ್ತಿದೆ.

Loading...