ಏರ್ ಟೆಲ್ ಇಂಟರ್ನೆಟ್ ಟಿವಿ ಬಿಡುಗಡೆ – News Mirchi

ಏರ್ ಟೆಲ್ ಇಂಟರ್ನೆಟ್ ಟಿವಿ ಬಿಡುಗಡೆ

ಏರ್ಟೆಲ್ ಆಂಡ್ರಾಯ್ಡ್ ಆಧಾರಿತ ಭಾರತದ ಮೊದಲ ಹೈಬ್ರಿಡ್ ಸೆಟ್ ಟಾಪ್ ಬಾಕ್ಸ್, ‘ಇಂಟರ್ನೆಟ್ ಟಿವಿ’ ಬಿಡುಗಡೆ ಮಾಡಿದೆ. ಇದರ ಮೂಲಕ ಪ್ರತ್ಯೇಕವಾಗಿ ಸ್ಮಾರ್ಟ್ ಟಿವಿ ಖರೀದಿಸದೆ ಈಗಿರುವ ನಿಮ್ಮ ಟಿವಿಯನ್ನು ಇಂಟರ್ನೆಟ್ ಟಿವಿಯನ್ನಾಗಿ ಬದಲಾಯಿಸಬಹುದು. ಇದರ ವಿಶೇಷತೆಯೆಂದರೆ ಅನ್ಲೈನ್ ನಲ್ಲಿ ಸಿಗುವ ಮಾಹಿತಿಯನ್ನು, ಕಾರ್ಯಕ್ರಮಗಳನ್ನು 500 ಕ್ಕೂ ಹೆಚ್ಚು ಸ್ಯಾಟಲೈಟ್ ಚಾನೆಲ್ ಗಳನ್ನು ನಿಮ್ಮ ಟಿವಿಯಲ್ಲೇ ನೋಡಬಹುದಾಗಿದೆ. [ಹೊಸ ಆಫರ್ ನೊಂದಿಗೆ ಮುಂದೆ ಬಂದ ಜಿಯೋ]

ಎರ್ ಟೆಲ್ ಇಂಟರ್ನೆಟ್ ಟಿವಿ ಮೂಲಕ ವೀಕ್ಷಕರು ತಮ ಮೆಚ್ಚಿನ ಕಾರ್ಯಕ್ರಮಗಳನ್ನು ಟಿವಿ ಪರದೆಯ ಮೇಲೆ ನೋಡಬಹುದಾಗಿದ್ದು, ತಮಗಿಷ್ಟವಾದ ಆಪ್ ಮತ್ತು ಗೇಮ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಈ ಹೈಬ್ರಿಡ್‌ ಸೆಟ್ ಟಾಪ್ ಬಾಕ್ಸ್ ನಲ್ಲಿ ಯೂಟ್ಯೂಬ್, ಗೂಗಲ್ ಪ್ಲೆ, ನೆಟ್ ಫ್ಲಿಕ್ಸ್, ಏರ್ಟೆಲ್ ಮೂವೀಸ್ ಮುಂತಾದ ಅಪ್ಲಿಕೇಷನ್ ಗಳನ್ನು ಮೊದಲೇ ಲೋಡ್ ಮಾಡಲಾಗಿರುತ್ತದೆ.

ನಿಮಗೆ ಬೇಕಾದ ಮಾಹಿತಿ, ಕಾರ್ಯಕ್ರಮ, ಚಾನೆಲ್ ನ್ನು ನಿಮ್ಮ ರಿಮೇಟ್ ಗೆ ಹೇಳಿ ನೋಡಿ, ಕೂಡಲೇ ನಿಮ್ಮ ಟಿವಿ ಪರದೆಯ ಮೇಲೆ ಸಂಬಂಧಿಸಿದ ವಿಷಯ ಲಭ್ಯವಾಗುತ್ತದೆ.

ಮೇ ಅಂತ್ಯದ ವೇಳೆ ಇತರೆ ಡಿಟಿಹೆಚ್ ಸೇವೆ ನೀಡುವ ಸಂಸ್ಥೆಗಳೂ ಹೈಬ್ರಿಡ್ ಸೆಟ್ ಬಾಕ್ಸ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾರೆ.

Loading...