ಏರ್ ಟೆಲ್ ಅನ್‌ಲಿಮಿಟೆಡ್ ಕಾಲ್ಸ್ ಆಫರ್

ರಿಲಯನ್ಸ್ ಜಿಯೋ ಮೊಬೈಲ್ ನಂಬರ್ ಪೋರ್ಟಬಿಲಿಟಿ ಗೆ ಸಿದ್ದವಾಗಿರುವುದಾಗಿ ಘೋಷಿಸಿದ ನಂತರ, ಇತರ ಟೆಲಿಕಾಂ ಕಂಪನಿಗಳಿಗೆ ತಮ್ಮ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ತಮ್ಮ ಗ್ರಾಹಕರು ರಿಲಯನ್ಸ್ ಜಿಯೋ ನೆಟ್ವರ್ಕ್ ಗೆ ವಲಸೆ ಹೋಗುವುದನ್ನು ತಡೆಯಲು ಏರ್ಟೆಲ್ ಅನಿಯಮಿತ ಕರೆ ಕೊಡುಗೆಯನ್ನು ಘೋಷಿಸಿದೆ.

ಈ ಕೊಡುಗೆ ರಿಲಯನ್ಸ್ ಜಿಯೋನಂತೆ ಕಂಡರೂ, ಕೆಲ ನಿರ್ಧಿಷ್ಟ ಮಿತಿಗಳಿವೆ. ಈ ಪ್ಯಾಕ್ ನ ವ್ಯಾಲಿಡಿಟಿ 28 ದಿನಗಳು ಮಾತ್ರ. ಇದಕ್ಕಾಗಿ ₹299 ರೀಚಾರ್ಜ್ ಮಾಡಿಸಬೇಕಿರುತ್ತದೆ.

ಈ ಕೊಡುಗೆಯಲ್ಲಿ ಯಾವುದೇ ನೆಟ್ವರ್ಕ್ ಗಾಗಲೀ, ಯಾವುದೇ ಸಮಯದ ಮಿತಿಯಿಲ್ಲದೆ ಅನಿಯಮಿತ ವಾಯ್ಸ್ ಕಾಲ್ ಮಾಡಬಹುದು. ಉಚಿತ ವಾಯ್ಸ್ ಕಾಲ್ ಜೊತೆಗೆ1 ಜಿಬಿ 3ಜಿ/ 4ಜಿ ಡಾಟಾ ಸಿಗುತ್ತದೆ.

ಈ ಆಫರ್ ಪಡೆಯಲು ನಿಮ್ಮ ಮೊಬೈಲಿನಿಂದ *121*1# ಗೆ ಡಯಲ್ ಮಾಡಿ.

ಅಥವಾ ಮೈ ಏರ್ಟೆಲ್ ಆಪ್ ನಿಂದ 299 ರೀಚಾರ್ಜ್ ಮಾಡಿ

ಅಥವಾ ಹತ್ತಿರದ ರೀಟೇಲರ್ ಬಳಿ ರೀಚಾರ್ಜ್ ಮಾಡಿಸಬಹುದು.